ಬೆಳಗಾವಿ :–
೧೦೮ ಆಂಬುಲೆನ್ಸ್ ಸಮಯಕ್ಕೆ ಬಾರದೆ ರಾಜ್ಯದಲ್ಲಿ ನೂರಾರು ಪ್ರಾಣಗಳು ಹಾದಿಯಲ್ಲೇ ಹೋಗುತ್ತಿವೆ ಎಂಬ ಆರೋಪಕ್ಕೆ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್,
ಇನ್ನು ಮುಂದೆ “ಆಂಬುಲೆನ್ಸ್ ಚಾಲಕರಿಗೆ ಸಮಯದ ನಿಗದಿ” ಮಾಡಲಾಗುವುದು. ಕರೆ ಮಾಡಿದ ೧೫ ನಿಮಿಷದಲ್ಲಿ ನಿಗದಿತ ಸ್ಥಳ ತಲುಪದಿದ್ದರೆ ₹೫ ಸಾವಿರ ದಂಡ ವಿಧಿಸಲಾಗುವುದು ಎಂದು ಹೇಳಿದರು.
ಆಂಬುಲೆನ್ಸ್ ೧೫ ನಿಮಿಷದಲ್ಲಿ ತಲುಪಿಸಿದರೆ ಶೇ.೯೦ ಸಮಸ್ಯೆ ಸರಿಯಾಗುತ್ತದೆ. ಈ ಬಗ್ಗೆ ಮಾರ್ಗಸೂಚಿ ತರುತ್ತೇವೆ ಅವರು ಹೇಳಿದರು.





