ಬೆಳಗಾವಿ :–
ಉತ್ತರ ಪ್ರದೇಶದ ಆಗ್ರಾದಲ್ಲಿ ತನ್ನ ಪತಿಯನ್ನು ಕೊಲೆ ಮಾಡಿ ಸ್ನಾನಗೃಹದಲ್ಲಿ ಹೂತುಹಾಕಿದ್ದ ರೂಬಿ, ಪೊಲೀಸರ ಭಯದಿಂದ ತನ್ನ ಸೋದರ ಮಾವನ ಬಳಿ ತಪ್ರೊಪ್ಪಿಕೊಂಡಿದ್ದಾಳೆ.
“ದೃಶ್ಯಂ” ಚಿತ್ರದಿಂದ ತನಗೆ ಈ ಕಲ್ಪನೆ, ಪ್ರೇರಣೆ ಬಂದಿತು ಮತ್ತು ೪೬ ದಿನಗಳ ಕಾಲ, ತನ್ನ ಗಂಡನನ್ನು ಸಮಾಧಿ ಮಾಡಿದ ೧೦ x ೪.೫ ಅಡಿ ಸ್ನಾನಗೃಹದ ನೆಲದಡಿಯಲ್ಲಿ ಶವದ ಮೇಲೆ ನಿಂತು ಸ್ನಾನ ಮಾಡಿದ್ದೇನೆ ಎಂದು ಪತ್ನಿ ಹೇಳಿದ್ದಾಳೆ.





