ಬೆಂಗಳೂರು :–
ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯಲ್ಲಿ ಜಾಮೀನಿನ ಮೇಲೆ ಹೊರಬಂದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯೊಬ್ಬ ಶುಕ್ರವಾರ ರಾತ್ರಿ ಆರು ಜನರನ್ನು ಕೊಲೆ ಮಾಡಿದ್ದಾನೆ.
ಹೆಂಡತಿ ಮತ್ತು ಇಬ್ಬರು ಮಕ್ಕಳು ಮಲಗಿದ್ದಾಗ ಅವನು ಕೊಲೆ ಮಾಡಿದ್ದು, ಅವರ ಕಿರುಚಾಟವನ್ನು ಹೊರಗೆ ಕೇಳಿಸದಂತೆ ಎಸಿ/ಫ್ಯಾನ್/ಟಿವಿ ಆನ್ ಮಾಡಿಟ್ಟಿದ್ದಾನೆ.
ನಂತರ ಅವನು ಆರು ಕಿಲೋಮೀಟರ್ ದೂರ ಕಾರು ಚಲಾಯಿಸಿ ೧೭ ವರ್ಷದ ಬಾಲಕಿ, ಆಕೆಯ ತಾಯಿ ಮತ್ತು ತನ್ನ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದ ಅಜ್ಜಿಯನ್ನು ಕೊಂದಿದ್ದಾನೆ.





