ಬಾಗಲಕೋಟೆ :–
ಬಾಗಲಕೋಟೆಯ ಬೀಳಗಿ ಪಟ್ಟಣದ ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ವಿದ್ಯಾ ಹಳ್ಳೂರು, ಕಾರ್ಯದರ್ಶಿ ರಚನಾ ಬಂಟನೂರು ಎಂಬುವವರು ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇವರು ಬೀಳಗಿ ತಾಲೂಕಿನಲ್ಲಿ 170 ಕ್ಕೂ ಹೆಚ್ಚು ಮಹಿಳಾ ಸಂಘಗಳನ್ನು ತೆರೆದು, ಅಧಿಕ ಬಡ್ಡಿ ನೀಡುವ ಆಮಿಷವೊಡ್ಡಿ ಒಂದೊಂದು ಸಂಘಕ್ಕೆ ₹15-20 ಲಕ್ಷಗಳ ವರೆಗೆ ವಂಚಿಸಿದ್ದಾರೆ. ವಿದ್ಯಾ, ರಚನಾ ಮಹಿಳೆಯರ ಬಳಿ ಸಂಗ್ರಹಿಸಿದ ಹಣವನ್ನು ಬೇರೆಡೆ ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.





