“೭೨ ಕಿಲೊ ತೂಕದ ದೈತ್ಯ ಹಲಸಿನ ಹಣ್ಣು ಬೆಳೆದ ಹಾಸನದ ರೈತ; ಅಮೆರಿಕದ ದಾಖಲೆ ಮುರಿಯಲು ಸಿದ್ಧತೆ”

ಮೈಸೂರು :–

ಹಾಸನದ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯ ರೈತ ಎಚ್‌.ಬಿ.ಪ್ರತಾಪ್ ಅವರ ತೋಟದಲ್ಲಿ ೭೨ ಕೆಜಿ ತೂಕದ ಹಲಸಿನ ಹಣ್ಣು ಬೆಳೆದಿದೆ.

೨೦೨೪ ರಲ್ಲಿ ಅಮೆರಿಕದ ಫ್ಲೋರಿಡಾದಲ್ಲಿ ಕಂಡುಬಂದ ೫೪.೪೩ ಕೆಜಿ ತೂಕದ ಹಲಸು ಇದುವರೆಗಿನ ಅತಿದೊಡ್ಡ ಹಣ್ಣು ಎಂದು ಪರಿಗಣಿಸಲಾಗಿತ್ತು.

ಹಾಸನದ ಈ ಹಲಸು ಅದನ್ನು ಮೀರಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಈ ಹಣ್ಣುಗಳನ್ನು “ವಿಶ್ವ ದಾಖಲೆಗೆ” ಕಳುಹಿಸುವ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಭಾನುಪ್ರಕಾಶ್‌ ತಿಳಿಸಿದ್ದಾರೆ.

Share this post:

Leave a Reply

Your email address will not be published. Required fields are marked *

You cannot copy content of this page