ಬೆಳಗಾವಿ :–
ಛತ್ತೀಸ್‌ಗಢದ ಭಿಲೈನಲ್ಲಿ ತನ್ನ ೨೩ ವರ್ಷದ ಗೆಳತಿ ಜತೆ ಒಯೋ ಹೋಟೆಲ್‌ನಲ್ಲಿ ತಂಗಿದ್ದ ೧೯ ವರ್ಷದ ಶಾದಾಬ್ ಶೇಖ್, ಮರುದಿನ ಶವವಾಗಿ ಪತ್ತೆಯಾಗಿದ್ದಾನೆ.
ವರದಿಗಳ ಪ್ರಕಾರ, ಶಾದಾಬ್ ಮತ್ತು ಆತನ ಗೆಳತಿ ಸಂಜೆ ೬:೩೦ರ ಸುಮಾರಿಗೆ ಹೋಟೆಲ್‌ಗೆ ಆಗಮಿಸಿ ಒಟ್ಟಿಗೆ ಸಮಯ ಕಳೆದಿದ್ದರು. ಇಬ್ಬರೂ ಸೇರಿ ಮದ್ಯ ಸೇವಿಸಿದ ಬಳಿಕ ವಾಗ್ವಾದ ಉಂಟಾಗಿದೆ. ವಾಗ್ವಾದದ ಬಳಿಕ, ಆತನ ಗೆಳತಿ ಮದ್ಯದ ಅಮಲಿನಲ್ಲಿ ನಿದ್ರೆಗೆ ಜಾರಿದಳು. ಈ ವೇಳೆ ಶಾದಾಬ್ ಫ್ಯಾನ್‌ಗೆ ನೇಣು ಹಾಕಿಕೊಂಡಿರಬಹುದು ಎಂದು ಶಂಕೆ ಉದ್ಭವಿಸಿದೆ.





