ಚಿಕ್ಕೋಡಿ :–
ಗ್ರಾಮೀಣ ಆರ್ಥಿಕತೆಯ ಸುಧಾರಣೆ ಹಾಗೂ ಶೋಷಿತ ಸಮುದಾಯಗಳ ಸಬಲೀಕರಣಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ‘ಬಿರೇಶ್ವರ ಸಹಕಾರಿ ಸಂಸ್ಥೆ’ಯ ಸಮಾಜಮುಖಿ ಕಳಕಳಿ ಮತ್ತು ಧೈಯಪೂರ್ಣ ಸೇವಾ ಪಯಣ ಶ್ಲಾಘನೀಯ ಎಂದು ಕೇಂದ್ರದ ಸಹಕಾರ ಖಾತೆ ರಾಜ್ಯ ಸಚಿವ ಮುರಳೀಧರ ಮೋಹೋಲ್ ಬಣ್ಣಿಸಿದರು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ಶನಿವಾರ ಶ್ರೀ ಬೀರೇಶ್ವರ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಆಡಳಿತ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದಲ್ಲಿ 8.5 ಲಕ್ಷ ಸಹಕಾರ ಸಂಸ್ಥೆಗಳು ಕಾರ್ಯ -ವರ್ಗಕ್ಕೆ ನಿರ್ವಹಿಸುತ್ತಿವೆ. ಸಹಕಾರ ಕ್ಷೇತ್ರದ ಸುಧಾರಣೆಗೆ ಕೇಂದ್ರ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಸಹಕಾರ ಸಂಸ್ಥೆ ಸ್ಥಾಪಿಸುವುದು ಸುಲಭ ಆದರೆ, ಜನರ ವಿಶ್ವಾಸ ಗಳಿಸಿ ಯಶಸ್ವಿಯಾಗಿ ಮುನ್ನಡೆಸುವುದು ದೊಡ್ಡ ಸವಾಲಾಗಿದೆ. ಆ ನಿಟ್ಟಿನಲ್ಲಿ ಜೊಲ್ಲೆ ದಂಪತಿ ಬೀರೇಶ್ವರ ಸಹಕಾರ ಸಂಸ್ಥೆಯನ್ನು ಮೂರು ರಾಜ್ಯಗಳಲ್ಲಿ ಬೆಳೆಸುವ ಮೂಲಕ ಜನರ ವಿಶ್ವಾನ ಗಳಿಸಿದ್ದಾರೆ ಎಂದರು.

ಅಣ್ಣಾಸಾಹೇಬ ಜೊಲ್ಲೆ ಹಾಗು ಶಶಿಕಲಾ ಜೊಲ್ಲೆ ಅವರು ಸಹಕಾರ ಕ್ಷೇತ್ರದ ಜತೆಗೆ ಶಿಕ್ಷಣ, ಆರೋಗ್ಯ ಹಾಗೂ ರಾಜಕೀಯ ಕ್ಷೇತ್ರಗಳಲ್ಲೂ ಕೆಲಸ ಮಾಡಿದ್ದಾರೆ. ಜನಪರ ಕಾರ್ಯಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಕರ್ನಾಟಕದಲ್ಲಿ ಜೊಲ್ಲೆ ಪರಿವಾರ ಸಹಕಾರ ಚಳವಳಿಗೆ ನೀಡುತ್ತಿರುವ ಕೊಡುಗೆ ಗಣನೀಯ ಎಂದು ಶ್ಲಾಘಿಸಿದರು .
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಶಾಸಕಿ ಶಶಿಕಲಾ ಜೊಲ್ಲೆ 1991ರಲ್ಲಿ ಜೊಲ್ಲೆ ಅವರ ನೇತೃತ್ವದಲ್ಲಿ ಆರಂಭವಾದ ಸಂಸ್ಥೆ ಜನರ ವಿಶ್ವಾಸದೊಂದಿಗೆ ಇಂದು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರಗಳಲ್ಲಿ 336 ಶಾಖೆಗಳನ್ನು ಹೊಂದಿದೆ. ಠೇವಣಿ, ಸಾಲದ ಜತೆಗೆ ವಿಮೆ, ವಿದ್ಯಾರ್ಥಿವೇತನ, ಪಿಂಚಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಬಡ ಮಕ್ಕಳ ಶಿಕ್ಷಣಕ್ಕಾಗಿ ವಾರ್ಷಿಕ 8 ಕೋಟಿ ರೂ. ಶಿಷ್ಯವೇತನ ನೀಡಲಾಗುತ್ತಿದೆ. ಕ್ರೀಡೆ, ಆಧ್ಯಾತ್ಮಿಕ ಕೇಂದ್ರಗಳು ಹಾಗೂ ವಿವಿಧ ಸಮಾಜಮುಖಿ ಕಾರ್ಯಗಳಿಗೆ ನೆರವು ನೀಡಲಾಗುತ್ತಿದೆ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್
ಮಾತನಾಡಿ ಸಂಸ್ಥೆಯಲ್ಲಿ ರೈತರು, ನೌಕರರು ಹಾಗೂ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ಶಕ್ತಿ ಜೊಲ್ಲೆ ಕುಟುಂಬ ವಿಶ್ವಾಸ ಗಳಿಸಿದೆ. ಬೀರೇಶ್ವರ ಸಂಸ್ಥೆ ಮೂರು ರಾಜ್ಯಗಳಲ್ಲಿ 236 ಶಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಇನ್ನಷ್ಟು ವಿಸ್ತರಿಸಿ ದೇಶವ್ಯಾಪಿ ಬೆಳೆಯಲಿ ಎಂದರು
ಮಹಾರಾಷ್ಟ್ರದರಾಜ್ಯಸಭೆ ಸದಸ್ಯಅಜಿತ್ ಘೋರ್ಪಡೆ ಮಾತನಾಡಿದರು ಜೊಲ್ಲೆ ದಂಪತಿಯ ದೂರದೃಷ್ಟಿಯಿಂದ ಆರಂಭವಾದ ಬೀರೇಶ್ವರ ಕ್ರೆಡಿಟ್ ಸೊಸೈಟಿ ಇಂದು ಹೆಮ್ಮರವಾಗಿ ಬೆಳೆದಿದೆ. ಬಡ ಜನರ ಆರ್ಥಿಕ ಶಕ್ತಿಯಾಗುವುದರ ಜತೆಗೆ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ. ಬ್ಯಾಂಕಿಂಗ್, ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜೊಲ್ಲೆ ಕುಟುಂಬ ತೊಡಗಿಸಿಕೊಂಡು ಜನರಿಗೆ ಆರ್ಥಿಕ ಬಲ ನೀಡುತ್ತಿದೆ ಎಂದರು.

ಮಹಾರಾಷ್ಟ್ರದ ರಾಜ್ಯಸಭೆ ಸದಸ್ಯಧನಂಜಯ ಮಹಾಡಿಕ ಮಾತನಾಡಿ, ”ಸಹಕಾರವೇ ಶಕ್ತಿ, ಸಹಕಾರವೇ ಅಭಿವೃದ್ಧಿಗೆ ದಾರಿ. ಸಹಕಾರ ಸಂಸ್ಥೆಗಳು ಕೇವಲ ಹಣಕಾಸಿನ ಸಂಸ್ಥೆಗಳಾಗಿ ಉಳಿಯದೆ ಜನಸಾಮಾನ್ಯರ ಉಳಿತಾಯಕ್ಕೆ ಬಲ ನೀಡುವ ಮೂಲಕ ಜನರನ್ನು ಹಾಗೂ ದೇಶವನ್ನು ಭಾರತವನ್ನು ಅಭಿವೃದ್ಧಿ ಯತ್ತ ಕೊಂಡೊಯ್ಯೂತ್ತಿದೆ. ಸ್ವಾವಲಂಬಿಯಾಗಿ ಜೊಲ್ಲೆ ಕುಟುಂಬ ಸಹಕಾರ ಕ್ಷೇತ್ರದ ಮೂಲಕ ಜನರಿಂದ, ಜನರಿಗಾಗಿ ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದೆ ಎಂದರು.
ಕೊಲ್ಲಾಪುರ ಕನೇರಿಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಗಳು ಆಶೀರ್ವಚನ ನುಡಿದು ‘ಗ್ರಾಮೀಣ ಭಾಗದ ಜನರ ಬದುಕಿನಲ್ಲಿ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಆರಂಭವಾದ ಬೀರೇಶ್ವರ ಸಂಸ್ಥೆ ಇಂದು ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಅಭಿವೃದ್ಧಿಯ ಶಕ್ತಿಯಾಗಿ ಬೆಳೆದಿದೆ. ಈ ಸಂಸ್ಥೆಯೊಂದರ ಮೂಲಕವೇ ನಾಲ್ಕು ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿರುವುದು ಗ್ರಾಮೀಣ ಅಭಿವೃದ್ಧಿಗೆ ಮಾದರಿ. ಬುದ್ದಿಮಾಂದ್ಯ ಮಕ್ಕಳಿಗಾಗಿ ಆರಂಭಿಸಿರುವುದು ಗಮನಾರ್ಹ,” ಎಂದರು.
ನಿಡಸೋಸಿ ಮಠದ ಶಿವಲಿಂಗೇಶ್ವರ ಸ್ವಾಮೀಜಿ ಆಶಿರ್ವಚನ ನಿಡಿದು”ಬೀರೇಶ್ವರ ಸಂಸ್ಥೆ ಸೇವೆ ದೇಶಾದ್ಯಂತ ವಿಸ್ತರಿಸಲಿ”, ಎಂದು ಆಶಿಸಿದರು.
ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಆಡಳಿತ ಭವನವನ್ನು ಕೇಂದ್ರ ಸಚಿವ ಪ್ರಲ್ಟಾದ್ ಜೋಶಿ ಉದ್ಘಾಟಿಸಿದರು. ಸಂಸದ ಜಗದೀಶ ಶೆಟ್ಟರ್, ಅರವಿಂದರಾವ್ ದೇಶಪಾಂಡೆ, ಶಿವಾಜಿ ಪಾಟೀಲ, ಸಮಜಿತ್ ಘಾಟಗೆ, ಶಾಸಕ ದುರ್ಯೋಧನ ಐಹೊಳೆ, ಮಾಜಿ ಶಾಸಕರಾದ ಪಿ.ರಾಜೀವ್, ಶ್ರೀಮಂತ ಪಾಟೀಲ, ಅನಿಲ ಬೆನಕೆ, ಸಂಜಯ ಪಾಟೀಲ, ಜಯಕುಮಾರ ಖೋತ್, ರಾಜೇಂದ್ರ ಪಾಟೀಲ, ಛಲವಾದಿ ನಾರಾಯಣಸ್ವಾಮಿ, ಸಂಸ್ಥೆಯ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಹಾಗೂ ಇತರರು ಇದ್ದರು.




