“ಯಾರೇ ಇರಲಿ, ಅದರಲ್ಲೂ ಅಧಿಕಾರಿಗಳು ತಂದೆ ತಾಯಿಗಳನ್ನು ಜೊತೆಯಲ್ಲಿಟ್ಟುಕೊಂಡು ನೋಡಬೇಕು ಪ್ರೀತಿಸಬೇಕು,ಆರೈಕೆ ಮಾಡಬೇಕು ಅದರಲ್ಲೂ ರೈತ ಕುಟುಂಬದಿಂದ ಬಂದ ನಾನಂತೂ ಈ ಕೆಲಸವನ್ನು ತಪ್ಪದೇ ಮಾಡುತ್ತಿರುವುದಾಗಿ”- ಮಾಧವ ಗಿತ್ತೆ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಪಟ್ಟಣದಲ್ಲಿರುವ ತಾ.ಪಂ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕಾಮದೇನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, “ಇದೀಗ ನಾನು ಎಸಿ ಇರಬಹುದು, ಮುಂದೆ ಯಾವುದೇ ಹುದ್ದೆ ಅಲಂಕರಿಸಿದರೂ ಈಗ ಮಾಡುತ್ತಿರುವ ಹಾಗೆಯೇ ರೈತರನ್ನು ಗೌರವಿಸುವ ಕೆಲಸ ಮಾಡುತ್ತೇನೆ. ರೈತರ ಸಮಸ್ಯೆಗಳಿಗೆ ಸ್ಪಂಧನೆ ಮಾಡಿದ್ದಲ್ಲಿ ಸಿಗುವ ತೃಪ್ತಿಯೇ ಬೇರೆ. ನಾನೂ ಕೂಡ ರೈತನ ಮಗ.ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸತಾಯಿಸದೇ ಕೆಲಸ ಮಾಡಿಕೊಡುವಂತೆ” ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಿಕ್ಕೋಡಿ ಕೃಷಿ ಇಲಾಖೆ ಉಪ ನಿರ್ದೇಶಕ ಹೆಚ್ ಡಿ ಕೋಳೆಕರ ಮಾತನಾಡಿ, ಕೃಷಿ ಇಲಾಖೆಯು ರೈತರಿಗೆ ಸಾಕಷ್ಟು ಸೌಲತ್ತುಗಳನ್ನು ಒದಗಿಸುತ್ತಿದ್ದು, ಅದರಲ್ಲೂ ಗುಣಮಟ್ಟದ ಬೀಜ, ಗೊಬ್ಬರ ಕೊಡುತ್ತಿದ್ದೇವೆ. ಯಾರೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಏನೇ ಸಮಸ್ಯೆ ಬಂದರೂ ಎದೆಗುಂದದೆ ಎದುರಿಸಬೇಕು. ಆತ್ಮಹತ್ಯೆಯೊಂದೇ ಪರಿಹಾರವಲ್ಲ” ಎಂದರು.

ಅಂತಾರಾಷ್ಟ್ರೀಯ ಮಟ್ಟದ ಕಲಾವಿದ ಬಾಬುರಾವ ನಡೋಣಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಅಧಿಕಾರಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ರೈತರು ಇಲ್ಲದೇ ಜಗತ್ತು ಇಲ್ಲ. ತಾನು ಉಪವಾಸ ಇದ್ದು ಜಗತ್ತಿಗೆ ಅನ್ನ ನೀಡುವ ರೈತನಿಗೆ ಕನ್ಯಾದಾನ ಮಾಡುವವರೂ ಇಲ್ಲದಂತಹ ಪರಿಸ್ಥಿಯು ನಮ್ಮ ದೇಶದಲ್ಲಿ ಇರುವುದನ್ನು ಕಾಣುತ್ತೇವೆ. ಇದು ತೊಲಗಬೇಕು: ಎಂದು ಹೇಳಿದರು.

Àಶಿಕ್ಷಣ ಪ್ರೇಮಿ ರುದ್ರಪ್ಪ ಸಂಗೊಪ್ಪಗೋಳ ಮಾತನಾಡಿ, ಟೊಮ್ಯಾಟೊ ಸೇರಿದಂತೆ ಕೃಷಿ ಉತ್ಪನ್ನಗಳ ಬೆಲೆ ಏರಿಕೆ ಆಗಿದ್ದಕ್ಕೆ ಯಾರೂ ಹಳಹಳಿ ಮಾಡುವ ಅವಶ್ಯಕತೆ ಇಲ್ಲ. ರೈತರ ಇಂತಹ ಬೆಳೆಗಳ ಬೆಲೆ ಏರಿದರೆ ಅನ್ನದಾತನಿಗೆ ಸಂತೃಪ್ತಿ. ರೈತು ಕೋಟ್ಯಾಧೀಶರಾದರೆ ಸಂತೋಷದ ವಿಷಯವೇ. ಹಾಗಾಗಿ ಕೃಷಿ ಉತ್ಪನ್ನಗಳಿಗೆ ಸರ್ಕಾರ ಬೆಂಬಲ ಬೆಲೆ ಕೊಡುವಂತೆ ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ರೈತರ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಅಧಿಕಾರಿಗಳಿಗೆ ಮನವಿ ನೀಡಲಾಯಿತು.

ಪತ್ರಕರ್ತ ಚಂದ್ರಶೇಖರ ಎಸ್ ಚಿನಕೇಕರ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿ ಮಂಜುನಾಥ ಜನಮಟ್ಟಿ, ಕಾರ್ಮಿಕ ನಿರೀಕ್ಷಕ ಸಂಜಯ ಭೋಸಲೆ, ಶಿವಾನಂದ ಬ್ಯಾಳಿ, ಓಂಕಾರಕ ಕಮತೆ, ಅಜ್ಜಪ್ಪ ಮಂಟೂರ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಕ್ತಾರ ತ್ಯಾಗರಾಜ ಕದಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾದೇವ ಸನದಿ ಸ್ವಾಗತಿಸಿದರು. ಬಾಳಸಾಹೇಬ ವಟಾರೆ ವಂದಿಸಿದರು.

ಚಿಕ್ಕೋಡಿ- “ಯಾರೇ ಇರಲಿ, ಅದರಲ್ಲೂ ಅಧಿಕಾರಿಗಳು ತಂದೆ ತಾಯಿಗಳನ್ನು ಜೊತೆಯಲ್ಲಿಟ್ಟುಕೊಂಡು ನೋಡಬೇಕು. ಪ್ರೀತಿಸಬೇಕು. ಆರೈಕೆ ಮಾಡಬೇಕು. ಅದರಲ್ಲೂ ರೈತ ಕುಟುಂಬದಿಂದ ಬಂದ ನಾನಂತೂ ಈ ಕೆಲಸವನ್ನು ತಪ್ಪದೇ ಮಾಡುತ್ತಿರುವುದಾಗಿ” ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಹೇಳಿದರು.

ಪಟ್ಟಣದ ತಾ.ಪಂ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕಾಮದೇನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, “ಇದೀಗ ನಾನು ಎಸಿ ಇರಬಹುದು, ಮುಂದೆ ಯಾವುದೇ ಹುದ್ದೆ ಅಲಂಕರಿಸಿದರೂ ಈಗ ಮಾಡುತ್ತಿರುವ ಹಾಗೆಯೇ ರೈತರನ್ನು ಗೌರವಿಸುವ ಕೆಲಸ ಮಾಡುತ್ತೇನೆ. ರೈತರ ಸಮಸ್ಯೆಗಳಿಗೆ ಸ್ಪಂಧನೆ ಮಾಡಿದ್ದಲ್ಲಿ ಸಿಗುವ ತೃಪ್ತಿಯೇ ಬೇರೆ. ನಾನೂ ಕೂಡ ರೈತನ ಮಗ.ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸತಾಯಿಸದೇ ಕೆಲಸ ಮಾಡಿಕೊಡುವಂತೆ” ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಿಕ್ಕೋಡಿ ಕೃಷಿ ಇಲಾಖೆ ಉಪ ನಿರ್ದೇಶಕ ಹೆಚ್ ಡಿ ಕೋಳೆಕರ ಮಾತನಾಡಿ, ಕೃಷಿ ಇಲಾಖೆಯು ರೈತರಿಗೆ ಸಾಕಷ್ಟು ಸೌಲತ್ತುಗಳನ್ನು ಒದಗಿಸುತ್ತಿದ್ದು, ಅದರಲ್ಲೂ ಗುಣಮಟ್ಟದ ಬೀಜ, ಗೊಬ್ಬರ ಕೊಡುತ್ತಿದ್ದೇವೆ. ಯಾರೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಏನೇ ಸಮಸ್ಯೆ ಬಂದರೂ ಎದೆಗುಂದದೆ ಎದುರಿಸಬೇಕು. ಆತ್ಮಹತ್ಯೆಯೊಂದೇ ಪರಿಹಾರವಲ್ಲ” ಎಂದರು.

ಅಂತಾರಾಷ್ಟ್ರೀಯ ಮಟ್ಟದ ಕಲಾವಿದ ಬಾಬುರಾವ ನಡೋಣಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಅಧಿಕಾರಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ರೈತರು ಇಲ್ಲದೇ ಜಗತ್ತು ಇಲ್ಲ. ತಾನು ಉಪವಾಸ ಇದ್ದು ಜಗತ್ತಿಗೆ ಅನ್ನ ನೀಡುವ ರೈತನಿಗೆ ಕನ್ಯಾದಾನ ಮಾಡುವವರೂ ಇಲ್ಲದಂತಹ ಪರಿಸ್ಥಿಯು ನಮ್ಮ ದೇಶದಲ್ಲಿ ಇರುವುದನ್ನು ಕಾಣುತ್ತೇವೆ. ಇದು ತೊಲಗಬೇಕು: ಎಂದು ಹೇಳಿದರು.

Àಶಿಕ್ಷಣ ಪ್ರೇಮಿ ರುದ್ರಪ್ಪ ಸಂಗೊಪ್ಪಗೋಳ ಮಾತನಾಡಿ, ಟೊಮ್ಯಾಟೊ ಸೇರಿದಂತೆ ಕೃಷಿ ಉತ್ಪನ್ನಗಳ ಬೆಲೆ ಏರಿಕೆ ಆಗಿದ್ದಕ್ಕೆ ಯಾರೂ ಹಳಹಳಿ ಮಾಡುವ ಅವಶ್ಯಕತೆ ಇಲ್ಲ. ರೈತರ ಇಂತಹ ಬೆಳೆಗಳ ಬೆಲೆ ಏರಿದರೆ ಅನ್ನದಾತನಿಗೆ ಸಂತೃಪ್ತಿ. ರೈತು ಕೋಟ್ಯಾಧೀಶರಾದರೆ ಸಂತೋಷದ ವಿಷಯವೇ. ಹಾಗಾಗಿ ಕೃಷಿ ಉತ್ಪನ್ನಗಳಿಗೆ ಸರ್ಕಾರ ಬೆಂಬಲ ಬೆಲೆ ಕೊಡುವಂತೆ ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ರೈತರ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಅಧಿಕಾರಿಗಳಿಗೆ ಮನವಿ ನೀಡಲಾಯಿತು.

ಪತ್ರಕರ್ತ ಚಂದ್ರಶೇಖರ ಎಸ್ ಚಿನಕೇಕರ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿ ಮಂಜುನಾಥ ಜನಮಟ್ಟಿ, ಕಾರ್ಮಿಕ ನಿರೀಕ್ಷಕ ಸಂಜಯ ಭೋಸಲೆ, ಶಿವಾನಂದ ಬ್ಯಾಳಿ, ಓಂಕಾರಕ ಕಮತೆ, ಅಜ್ಜಪ್ಪ ಮಂಟೂರ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಕ್ತಾರ ತ್ಯಾಗರಾಜ ಕದಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾದೇವ ಸನದಿ ಸ್ವಾಗತಿಸಿದರು. ಬಾಳಸಾಹೇಬ ವಟಾರೆ ವಂದಿಸಿದರು.

Share with Your friends

You May Also Like

More From Author

+ There are no comments

Add yours