“ಚಿಕ್ಕೋಡಿ ತಾಲೂಕಿನಲ್ಲಿ ವಿವಿಧ ಹಂತಗಳಲ್ಲಿ ಮತದಾರರ ನೋಂದಣಿ ಕಾರ್ಯ ನಡೆಯುತ್ತಿದೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಕಾಲೇಜುಗಳಲ್ಲಿ  1017  ಮತದಾರರ ನೋಂದಣಿ

ಚುನಾವಣಾ ಆಯೋಗದ ಸೂಚನೆಯಂತೆ ಚಿಕ್ಕೋಡಿ ತಾಲೂಕಿನಲ್ಲಿ ವಿವಿಧ ಹಂತಗಳಲ್ಲಿ ಮತದಾರರ ನೋಂದಣಿ ಕಾರ್ಯ ನಡೆಯುತ್ತಿದೆ. ಹೊಸ ಮತದಾರರು ವಂಚಿತರಾಗದಂತೆ ನೋಡಿಕೊಳ್ಳಲು ಪ್ರತಿ ಕಾಲೇಜಿಗೆ ತೆರಳಿ ಮತದಾರರ ನೋಂದಣಿಗೆ ವಿಶೇಷ ಆಂದೋಲನ ಜಾರಿಗೊಳಿಸಲಾಗಿದೆ. ತಾಲೂಕಾ ಆಡಳಿತ ಮತ್ತು ತಾಲೂಕಾ ಪಂಚಾಯತ ಅಭಿಯಾನವನ್ನು ಅನುಷ್ಠಾನಗೊಳಿಸಲಾಯಿತು. ಇದಕ್ಕೂ ಮುನ್ನ  ಉಪವಿಭಾಗಾಧಿರಿಗಳು ,ತಹಸಿಲ್ದಾರರು. ಹಾಗೂ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಎಲ್ಲ ಕಾಲೇಜುಗಳ ಪ್ರತಿನಿಧಿಗಳಿಗೆ  ಸಭೆ ನಡೆಸಿ ಈ ಕುರಿತು ಮಾಹಿತಿ ನೀಡಿದರು.ಚಿಕ್ಕೋಡಿ ತಾಲೂಕಿನಲ್ಲಿ ಡಿ.1 ರಿಂದ 4 ರವರೆಗೆ ಕಾಲೇಜುಗಳಿಗೆ ತೆರಳಿ ಮತದಾರರ ನೋಂದಣಿ ಕಾರ್ಯ ನಡೆದಿದೆ. 1017 ಕ್ಕೂ ಹೆಚ್ಚು ಮತದಾರರು ನೋಂದಣಿಯಾಗಿದ್ದಾರೆ. ಚಿಕ್ಕೋಡಿ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಿಗೆ ಆಡಳಿತಾಧಿಕಾರಿಗಳ ತಂಡಗಳು ಮೂಲಕ ಭೇಟಿ ನೀಡಿದರು ಈ ವೇಳೆ 18  ವರ್ಷದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಂಡರು. 17 ಪ್ಲಸ್ ಹಾಗೂ 18  ವರ್ಷದ ವಿಧ್ಯಾರ್ಥಿಗಳ ನೋಂದಣಿ  ಇದಲ್ಲದೇ ಕೆಲವು  ಕಾಲೇಜುಗಳಲ್ಲೂ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಲು. ತಾಲೂಕಿನಲ್ಲಿರುವ ಕಾಲೇಜುಗಳು ಪ್ರತಿನಿಧಿಗಳ ಸಭೆ ನಡೆಸಿ ಹೆಸರು ನೋಂದಾಯಿಸಲು ಅಗತ್ಯ ಅರ್ಜಿಗಳನ್ನು ನೀಡಲಾಯಿತು. ಅದಲ್ಲದೆ ಜಾಗೃತಿ ಮೂಡಿಸಿ ಅಭಿಯಾನವನ್ನು ಯಶಸ್ವಿಗೊಳಿಸುವುದು ತಹಸೀಲ್ದಾರ್ ಸಿ. ಎಸ್. ಕುಲಕರ್ಣಿ ಅವರು ವಿವಿಧ ಅಧಿಕಾರಿಗಳು, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್ ಎಸ್ ಕಾದ್ರೋಳಿ ಅವರ ವಿವಿದ ಅಧಿಕಾರಿಗಳು  ಈ ಅಭಿಯಾನವನ್ನು ಪ್ರತಿ ಕಾಲೇಜುಗಳಲ್ಲಿ ಜಾರಿಗೊಳಿಸಲಾಯಿತು. ಹೊಸ ಮತದಾರರ ಸೇರ್ಪಡೆಗೆ ಡಿಸೆಂಬರ್ 9 ಕೊನೆಯ ದಿನವಾಗಿದೆ. ಆ ನಂತರ ಜನವರಿಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಅದಕ್ಕಾಗಿ ಬಿಎಲ್‌ಒಗಳು ಗ್ರಾಮ ಪಂಚಾತಯ ಅದಿಕಾರಿಗಳು ಸಿಬ್ಬಂದಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಸಿಬ್ಬಂದಿಗಳು  ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು  ಮತ್ತು ಪ್ರತಿ ಗ್ರಾಮಗಳಲ್ಲಿ ಮತ್ತು ಮತದಾರರ ಪಟ್ಟಿಯಲ್ಲಿರುವ ಎಲ್ಲಾ ಆಡಳಿತ ವ್ಯವಸ್ಥೆಗಳನ್ನು ಬಳಸಿಕೊಂಡು ಮನೆ-ಮನೆ ಸಮೀಕ್ಷೆಯನ್ನು ಮಾಡಲಾಗುತ್ತದೆ.ಹೆಸರುಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಅಭಿಯಾನದಿಂದ ಮತದಾರರ ಸಂಖ್ಯೆ ಹೆಚ್ಚಾಗಲಿದೆ. ತಾಲೂಕಿನ  31 ಕಾಲೇಜುಗಳಿಗೆ ತೆರಳಿ ಈ ಅಭಿಯಾನ ಜಾರಿಗೊಳಿಸಲಾಗಿದೆ.ಈ ಅಭಿಯಾನದಲ್ಲಿ ಕಾಲೇಜುನ ಪ್ರಾಚಾರ್ಯರು ಸಹ ಸಹಕಾರ ನೀಡಿದ್ದಾರೆ  ಇಲ್ಲಿವರಿಗೆ 5220 ವಿಧ್ಯಾರ್ಥಿಗಳು  ನೋಂದಣಿ ಆಗಿದ್ದಾರೆ


Share with Your friends

You May Also Like

More From Author

+ There are no comments

Add yours