“ಹೊರಗಡೆ ಔಷಧ ಖರೀದಿಸಲು ಸರ್ಕಾರಿ ವೈದ್ಯರು ಚೀಟಿ ಬರೆದು ಕೊಡುವುದನ್ನು ಸರ್ಕಾರನಿಷೇಧಿಸಿದೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಬೆಂಗಳೂರು :–

ಸರ್ಕಾರಿ ಡಾಕ್ಟರ್‌ಗಳಿಗೆ ಆರೋಗ್ಯ ಇಲಾಖೆ ಎಚ್ಚರಿಕೆ

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಎಲ್ಲಾ ಔಷಧಗಳನ್ನು ಆರೋಗ್ಯ

ಇಲಾಖೆಯಔಷಧಾಲಯದಿಂದಸರಬರಾಜುಮಾಡಲಾಗುತ್ತಿದೆ.ಹೀಗಿದ್ದರೂ ಹೊರಗಡೆ ಔಷಧಿ ಖರೀದಿಸಲು ಸರ್ಕಾರಿ ವೈದ್ಯರು ಚೀಟಿ ಬರೆದು ಕಳುಹಿಸಿದರೆ ಅವರನ್ನು ಕೂಡಲೇ ಅಮಾನತುಗೊಳಿಸಲಾಗುವುದು ಎಂದು

ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿರಜನೀಶ್ ಹೇಳಿದ್ದಾರೆ. ಇದಲ್ಲದೇ, ನಾವುರೋಗಿಗಳಿಗೆ ಔಷಧಿಖರೀದಿಸಲು ಹೊರಗಡೆಗೆ ಚೀಟಿ ಬರೆದು ಕಳುಹಿಸುತ್ತಿಲ್ಲ ಹಾಗೂ ಹೊರಗಿನ ಖಾಸಗಿ ಔಷಧಿ ಮಳಿಗೆಗಳ ಚೀಟಿಯಲ್ಲಿ ವೈದ್ಯ ಸಲಹೆ ಬರೆಯವುದು ಮತ್ತಿತರ ತಪ್ಪುಗಳನ್ನು ಮಾಡುತ್ತಿಲ್ಲ ಎಂದು ಕೂಡಲೇ ಪ್ರಮಾಣ ಪತ್ರ ಸಲ್ಲಿಸಲು ಎಲ್ಲಾ ವೈದ್ಯರಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಜತೆಗೆ ಈ ರೀತಿಯ ಪ್ರಮಾಣಪತ್ರ ನೀಡಿದನಂತರವಷ್ಟೇ ಜುಲೈ ತಿಂಗಳವೇತನ ನೀಡಲು ಆಯಾ ಜಿಲ್ಲೆಗಳಮುಖ್ಯ ಆಡಳಿತಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನಸೂಚನೆ ನೀಡಲಾಗಿದೆ. ಹೊರಗಡೆ ಔಷಧ ಖರೀದಿಸಲು ಸರ್ಕಾರಿ ವೈದ್ಯರು ಚೀಟಿ ಬರೆದು ಕೊಡುವುದನ್ನು ಸರ್ಕಾರನಿಷೇಧಿಸಿದೆ. ಕೆಲ ಆಸ್ಪತ್ರೆಗಳು ಆಸ್ಪತ್ರೆ ಫಾರ್ಮಾಸಿಸ್ಟ್‌ಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ರೋಗಿಗಳಿಗೆ ಔಷಧಿಗಳನ್ನು ಬರೆದುಕೊಡುವುದು ಹಾಗೂ ಹೊರಗಿನಿಂದ ಔಷಧಿಗಳನ್ನು ಖರೀದಿಸಲು ಒತ್ತಾಯಿಸುತ್ತಿರುವುದು ತುಮಕೂರಿನ ಕೊರಟಗೆರೆ ಆಸ್ಪತ್ರೆಗೆ ಭೇಟಿ ನೀಡಿದಾಗ ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಎಲ್ಲಾ ವೈದ್ಯ ರಿಂದನಾವುತಪ್ಪು ಕೆಲಸಗಳಲ್ಲಿ ತೊಡಗಿಲ್ಲಎಂದುಸ್ವಯಂಘೋಷಿತಪತ್ರ ಪಡೆದುಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಸೂಚನೆ ನೀಡಿದ್ದಾರೆ.


Share with Your friends

You May Also Like

More From Author

+ There are no comments

Add yours