“ಭೂಮಿಯ ರಕ್ಷಣೆಗೆ ಸಂತರು, ರೈತರ ಮಹಾಸಮಾವೇಶ”-ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು”

ಚಿಕ್ಕೋಡಿ: ಸಾವಯವ ಕೃಷಿಗೆ ಉತ್ತೇಜಿಸುವ ಸಲುವಾಗಿ ಮಹಾರಾಷ್ಟ್ರದ ಕನ್ನೇರಿ ಶ್ರೀ ಸಿದ್ಧಗಿರಿ ಸಂಸ್ಥಾನದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಸಾವಯವ ಕೃಷಿ ಪರಿವಾರ ಮತ್ತು ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮಸ್್ರ ಮಲ್ಟಿ ಸ್ಟೇಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಜ.12, 13 ರಂದು. `ಭೂತಾಯಿಯ ರಕ್ಷಣೆಗೆ ಸಂತರು, ರೈತರ ಮಹಾಸಮಾವೇಶ ಎಂಬ ಶಿರ್ಷಿಕೆಯಡಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕನ್ನೇರಿಯ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಸೋಮವಾರ ಇಲ್ಲಿನ ಸಂಸದರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಜೇಷ್ಠ ಸಾಧು-ಸಂತರು, ಧರ್ಮದಶಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ಕೃಷಿ ತೋಟಗಾರಿಕೆ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ರೈತರು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ ಭಾಗವಹಿಸುವ ಮಹನೀಯರು ಸಾವಯವ ಕೃಷಿ, ಗ್ರಾಮೀಣ ಜೀವನ ಸುಧಾರಣೆ, ಗೋವುಗಳ ಸರಂಕ್ಷಣೆ, ಪರಿಸರ ಮುಂತಾದ ವಿಷಯಗಳ ಅನುಷ್ಠಾನದಲ್ಲಿ ಒಕ್ಕೊರಲಿನ ಧ್ವನಿ ಆಲಿಸುವ ಆಶಯವೇ ಈ ಸಮಾವೇಶದ ಮೂಲ

ಉದ್ದೇಶವಾಗಿದೆ ಎಂದರು. ಈ ಸಮಾವೇಶದಲ್ಲಿ ‘ವಿನಾಶದ ಅಂಚಿನಲ್ಲಿರುವ

ಭೂಮಿಯನ್ನು ರಕ್ಷಣೆ ಮಾಡಿ ಈ ನೆಲದ ಮಣ್ಣು ವಿಷಕಾರಿಯಾಗಿರುವುದನ್ನು ತಡೆಯುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ಪ್ರಾತ್ಯಕ್ಷಿಕೆಗಳ ಜೊತೆಗೆ ಸಾಧು- ಸಂತರು, ರೈತರು ಇದರ ಬಗ್ಗೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದರು.

ಹೆಚ್ಚು ಇಳುವರಿ ತೆಗೆಯುವ ಮಹದಾಸೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ವಿಷಕಾರಿಯಾಗುತ್ತಿರುವುದನ್ನು ತಡೆಬೇಕಾಗಿರುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಅಲ್ಲದೇ ಸಾವಯವ ಕೃಷಿ ಮಾಡಿದ ರೈತರಿಗೆ ಮಠಗಳು ಮಾರುಕಟ್ಟೆಯನ್ನು ಒದಗಿಸಲು ಮುಂದಾಗಬೇಕಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಕೆಲವು ಮಠಾಧಿಶರು ಹಾಗೂ ಕೃಷಿಕರು ಸಾಕಷ್ಟು ಸಾವಯವ ಕೃಷಿಯನ್ನು ಕೈಗೊಂಡಿದ್ದಾರೆ. ಇದೀಗ ಮತ್ತೇ ನಾವೂ ಸಾವಯವ ಕೃಷಿಯತ್ತ ಹೆಚ್ಚು ಒಲವು ತೋರಿಸಬೇಕಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಂದಿಪುರ ಮಠದ ಡಾ. ಮಹೇಶ್ವರ ಸ್ವಾಮೀಜಿ, ಬಳ್ಳಾರಿ – ಕಲ್ಯಾಣಿ ಮಹಾಸ್ವಾಮೀಜಿ, ಹರಡನಹಳ್ಳಿ ಪಂಚಾಕ್ಷರಿ ಶಿವಾಚಾರ್ಯ ಸ್ವಾಮಿಜಿ, ಯಾದಗಿರಿಯ ಗಿರಿಮಲ್ಲೇಶ್ವರ ಸ್ವಾಮೀಜಿ, ಮುಧೋಳದ ಶಂಕರಾರೂಢ ಮಹಾಸ್ವಾಮಿಗಳು, ಕೃಷ್ಣಾನಂದ ಮಹಾಸ್ವಾಮೀಜಿ, ಆನಂದ, ಆರ್.ಟಿ.ಪಾಟೀಲ, ಸಾವಯವ ಕೃಷಿ ಪರಿವಾರದ ಅಧ್ಯಕ್ಷ ದತ್ತಾತ್ರೇಯ ರಾಮಚಂದ್ರ ಹೆಗಡೆ, ದುಂಡಪ್ಪಾ ಬೆಂಡವಾಡೆ ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours