“ಕೇವಲ ಸಮುದಾಯ ಭವನ,ಗಟಾರ,ರಸ್ತೆ ಅಂದರೆ ಅಭಿವೃದ್ಧಿ ಎಂದು ನಮ್ಮ ಶಾಸಕರು,ವಿಪ ಸದಸ್ಯರು ತಿಳಿದಿದ್ದಾರೆ,ನೀರಾವರಿ, ಆರೋಗ್ಯ,ಶಿಕ್ಷಣ, ಉದ್ಯೋಗ ಇವುಗಳ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ”- ಸಂಜು ಬಡಿಗೇರ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

“ಚಿಕ್ಕೋಡಿ : ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಪದಾಧಿಕಾರಿಗಳು ಆಯ್ಕೆ.
ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಸಭೆ ನಡಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರ-ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಉಪಾಧ್ಯಕ್ಷರಾಗಿ ಸತೀಶ್ ಚಿಂಗಳೆ, ಮಹಿಳಾ ಘಟಕದ ಅಧ್ಯಕ್ಷರಾಗಿ ಹಸೀನಾ ಪಟೇಲ್,ಕಾರ್ಯದರ್ಶಿ ಯಾಗಿ ಮಂಗಲ ವಾಗಳೆ ಇವರನ್ನು ಆಯ್ಕೆ ಮಾಡಲಾಯಿತು.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು ಬಡಿಗೇರ ಮಾತನಾಡಿ,ನಮ್ಮ ಜನಪ್ರತಿನಿಧಿಗಳಿಗೆ ಚಿಕ್ಕೋಡಿ ಜಿಲ್ಲೆ ಮಾಡುವ ಇಚ್ಛೆ ಇರುವುದಿಲ್ಲ, ಕೇವಲ ವೋಟಿಗಾಗಿ ಸುಳ್ಳಿನ ಮೇಲೆ ಸುಳ್ಳು ಹೇಳುವ ಮೂಲಕ ಜನರನ್ನು ಮೋಸ ಮಾಡಿ ಮತ ಪಡೆಯುತ್ತಾರೆ,ನಮ್ಮ ಭಾಗವು ಅಭಿವೃದ್ಧಿಯಿಂದ ವಂಚಿತವಾಗಿದೆ, ಕೇವಲ ಸಮುದಾಯ ಭವನ, ಗಟಾರ ಮತ್ತು ರಸ್ತೆ ಅಂದರೆ ಅಭಿವೃದ್ಧಿ ಎಂದು ನಮ್ಮ ಶಾಸಕರು ಮತ್ತು ವಿಪ ಸದಸ್ಯರು ತಿಳಿದಿದ್ದಾರೆ,ನೀರಾವರಿ, ಆರೋಗ್ಯ,ಶಿಕ್ಷಣ ಮತ್ತು ಉದ್ಯೋಗ ಇವುಗಳ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ,ನಾವು ಚಿಕ್ಕೋಡಿ ಜಿಲ್ಲೆ ಆಗುವವರೆಗೆ ಸತತ ಹೋರಾಟ ಮಾಡುತ್ತೇವೆ,ಶಾಸಕರ ಮನೆ ಮುಂದೆ ಧರಣಿ ಕೂಡುವ ಕಾರ್ಯವನ್ನೂ ಸಹ ಸದ್ಯದಲ್ಲಿ ಮಾಡುತ್ತೇವೆ ಎಂದು ಹೇಳಿದರು, ಸಮಾಜ ಸೇವಕ ಚಂದ್ರಕಾAತ ಹುಕ್ಕೇರಿ ಮಾತನಾಡಿ, ಚಿಕ್ಕೋಡಿಯನ್ನು ಪ್ರಕಾಶ ಹುಕ್ಕೇರಿ, ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಈ ತ್ರೀಮೂರ್ತಿಗಳು ಮನಸ್ಸು ಮಾಡಿದರೆ ಜಿಲ್ಲೆ ಮಾಡುವುದು ಕಠಿಣವಿಲ್ಲ,ಆದರೆ ಇವರು ಯಾಕೆ ಸುಮ್ಮನಿದ್ದಾರೆ ಎಂಬುದು ತಿಳಿಯುತ್ತಿಲ್ಲ,ಪ್ರಕಾಶ ಹುಕ್ಕೇರಿ ಯಾವುದನ್ನೂ ಹಿಂದಕ್ಕೆ ಬಿಡುವವರಲ್ಲಾ,ಚಿಕ್ಕೋಡಿ ಜಿಲ್ಲೆಯ ವಿಷಯದಲ್ಲಿ ಮೌನವಾಗಿದ್ದು ಏಕೆ,ಇವರಿಗೆ ಯಾರ ಒತ್ತಡವಿದೆ ? ಕ್ಷೇತ್ರದ ಜನರ ಬೆಂಬಲ ಇರುವಾಗ ಇವರು ಯಾಕೆ ಜಿಲ್ಲೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಒಂದೂ ತಿಳಿಯಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ವೀರುಪಾಕ್ಷಿ ಕವಟಗಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರಾದ ಸಂಜು ಬಡಿಗೇರ,ಚಂದ್ರಕಾAತ ಹುಕ್ಕೇರಿ, ಗೌರವ ಅಧ್ಯಕ್ಷರಾದ ಸಂಜಯ ಪಾಟೀಲ,ಸತೀಶ ಚಿಂಗಳೆ, ಸಂತೋಷ ಪೂಜೇರಿ,ಬಸವರಾಜ ಸಜಾನೆ,ರಫಿಕ್ ಪಠಾಣ,ಪ್ರತಾಪ ಪಾಟೀಲ,ದುಂಡಪ್ಪಾ ಬಡಿಗೇರ, ಅಮುಲ ನಾವಿ,ನಂದಕುಮಾರ, ನಾಗವ್ವ ಕುರಣೆ,ಸರಿತಾ ಹಜಾರೆ, ಮಂಗಲ ವಾಗಲೆ, ಅಶ್ವಿನಿ ಜಗದಾಲೆ,ಪ್ರೀತಿ ಗಾಯಕವಾಡ, ರುಕ್ಸಾನಾ ಜಮಾದಾರ,ಸಾಜೀದ ಪಠಾಣ,ರಜಿಯಾ ನನದಿ ಹಾಗೂ ಹಲವಾರು ಹೋರಾಟಗಾರರು ಉಪಸ್ಥಿತರಿದ್ದರು.”


Share with Your friends

You May Also Like

More From Author

+ There are no comments

Add yours