“ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಮನವಿ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಕರವೇ ಡಾ|| ಪುನೀತ್ ರಾಜಕುಮಾರ ಅಭಿಮಾನಿಗಳ ಬಳಗ ದಿಂದ ಉಪವಿಭಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಯವರಿಗೆ ಮನವಿ,

ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಳ್ಕರ್ ಅವರು ತಮ್ಮ ಹೇಳಿಕೆ ಮೂಲಕ ಕರ್ನಾಟಕದ ಕನ್ನಡಿಗರ ಸಾರ್ವಭೌಮತ್ವ ಹಾಗೂ ಗಡಿನಾಡು ಭಾಷಾ ಸಾಮರಸ್ಯಕ್ಕೆ ಕದಡಲು ಕಿಚ್ಚು ಹಚ್ಚಿದ್ದಾರೆ ಕನ್ನಡತಿ ಎಂದು ಹೇಳಿಕೊಳ್ಳುವವರು ಚುನಾವಣೆ ಸಂದರ್ಭದಲ್ಲಿ ಮತಕ್ಕೋಸ್ಕರ ಬೆಂಕಿ ಹಚ್ಚುವ ಸಾಹಸಕ್ಕೆ ಕೈ ಹಾಕಿರುವುದು ರಾಜಕೀಯ ಹುನ್ನಾರವಲ್ಲದೆ ಬೇರೇನೂ ಅಲ್ಲ ಎಂದು ಕರವೇ ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಹೇಳಿಕೆಯನ್ನು ಖಂಡನೆ ಮಾಡುತ್ತದೆ ತಕ್ಷಣ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ತಕ್ಷಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸುತ್ತೇವೆ ಮತ್ತು ಚಿಕ್ಕೋಡಿ ನಗರದಲ್ಲಿ ಇರುವಂತ ಎಲ್ಲಾ ಅಂಗಡಿ ಮುಗಟ್ಟಗಳ ಮೇಲೆ ಇರುವಂತಹ ಆಂಗ್ಲ, ಮರಾಠಿ, ಹಿಂದಿ ನಾಮಪಲಕಗಳನ್ನು ತೆಗೆಯಬೇಕು ಏಕೆಂದರೆ ಕರ್ನಾಟಕ ರಾಜ್ಯ ಸರ್ಕಾರದ ಆದೇಶ ಇದ್ದರೂ ಸಹತ ಅಂಗಡಿ ಮಾಲೀಕರು ತೆಗೆಯಲು ಮುಂದಾಗುತ್ತಿಲ್ಲ ನಾವು ಸುಮಾರು ಸಲ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರು ಕೂಡ

ಪ್ರಯೋಜನವಾಗಲಿಲ್ಲ ಆದ್ದರಿಂದ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಎಲ್ಲಾ ಅಂಗಡಿಗಳ ಮೇಲೆ ಮತ್ತು ವಾಣಿಜ್ಯ ಸಂಘ ಸಂಸ್ಥೆಗಳ ಮೇಲೆ ಕಡ್ಡಾಯವಾಗಿ ಸರ್ಕಾರ ದೇಶದ ಆದೇಶದ ಪ್ರಕಾರ ಶೇಕಡಾ 60% ರಷ್ಟು ಭಾಗ ಕನ್ನಡವಾಗಿರಬೇಕು ನಂತರ ಉಳಿದ ಭಾಷೆ ಇರಬೇಕು ಎಂದು ಸರ್ಕಾರ ಸುಗ್ರೀವಾಜ್ಞೆ ತಂದಿದೆ ಇದರ ಪ್ರಕಾರ ಚಿಕ್ಕೋಡಿ ತಾಲೂಕಿನಲ್ಲಿ ಎಲ್ಲಾ ಅಂಗಡಿ ಮಾಲೀಕರಿಗೆ ನೋಟಿಸು ಮೂಲಕ ಶೇಕಡ 60ರಷ್ಟು ಕನ್ನಡ ನಾಮಪಲಕ ಆಗಬೇಕೆಂದು ಅವರಿಗೆ ತಿಳಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ಅಧ್ಯಕ್ಷರಾದ, ಅಮೂಲ ನಾವಿ, ಸಚಿನ್ ಸನದಿ, ಶಿವರಾಜ ಸನದಿ, ಅಮರ್ ಕಾಂಬಳೆ, ಲವಕುಶ ಸನದಿ, ಪ್ರವೀಣ ವಡೆರ್, ಕುಮಾರ್ ನಾಯಿಕ, ವಿಠ್ಠಲ ಖಿಲಾರೆ, ಅರಿಹಂತ ಹಜಾರೆ, ರಾಹುಲ ಕಾಡಾಪುರ, ವಿಶ್ವನಾಥ್ ಪಾಟೀಲ, ಸಾಗರ ಪಾಟೀಲ ಹಾಗೂ ಸೌರಭ ಹಿರೇಮಠ ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours