“ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಲು, 2 ನೇ ಬಾರಿಗೆ ಅಣ್ಣಾಸಾಹೇಬ ಜೊಲ್ಲೆ ಲೋಕಸಭೆಗೆ ಮತ್ತೊಮ್ಮೆ ಆಯ್ಕೆಯಾಗಲು ನಿಪ್ಪಾಣಿಯಲ್ಲಿ ಪಾದಯಾತ್ರೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ನರೇಂದ್ರ ಮೋದಿ ಜಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಲು ಹಾಗೂ 2 ನೇ ಬಾರಿಗೆ ಅಣ್ಣಾಸಾಹೇಬ ಜೊಲ್ಲೆ ಲೋಕಸಭೆಗೆ ಮತ್ತೊಮ್ಮೆ ಆಯ್ಕೆಯಾಗಲು ನಿಪ್ಪಾಣಿಯಿಂದ ಅಂಬಿಕಾ ದೇವಸ್ಥಾನವರೆಗೆ ಕಾರ್ಯಕರ್ತರಿಂದ ಪಾದಯಾತ್ರೆ

ಶುಕ್ರವಾರ ಶ್ರೀ ರಾಮ ಸೇನಾ ಹಿಂದೂಸ್ಥಾನ ನಿಪ್ಪಾಣಿ ವತಿಯಿಂದ ಆಯೋಜಿಸಿದ್ದ ನಿಪ್ಪಾಣಿ ನಗರದ ಹಾಲಸಿದ್ದನಾಥ ಮಂದಿರದಿಂದ ಮಮದಾಪೂರ ಗ್ರಾಮದ 400 ವರ್ಷಗಳ ಇತಿಹಾಸವಿರುವ ಶ್ರೀ ಅಂಬಿಕಾ ಮಂದಿರವರೆಗೆ ಪಾದಯಾತ್ರೆಯನ್ನು ನಗರಸಭೆ ಸದಸ್ಯರು,ಸ್ಥಳೀಯ ಮುಖಂಡರು,ಮಹಿಳಾ ಮೋರ್ಚಾ ಸದಸ್ಯರು,ಪಕ್ಷದ ಕಾರ್ಯಕರ್ತರು ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಶ್ರೀ. ಬಸವಪ್ರಸಾದ ಜೊಲ್ಲೆ ಯವರು ಯವರು ಪಾದಯಾತ್ರೆ ನಡೆಸಿ ಶ್ರೀ ಅಂಬಿಕಾ ಮಾತೆಯಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಲು ಮತ್ತು ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು 2 ನೇ ಬಾರಿಗೆ ಲೋಕಸಭೆಗೆ ಮತ್ತೊಮ್ಮೆ ಅಧಿಕ ಮತಗಳ ಅಂತರಗಳಿಂದ ಗೆಲ್ಲುವಂತೆ ಪ್ರಾರ್ಥನೆ ಮಾಡಿದರು.

ಇದಕ್ಕೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಯವರು ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ
ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದರು.

ಈ ಸಂದರ್ಭದಲ್ಲಿ ನಿಲೇಶ ಹತ್ತಿ,ಸಂದೀಪ ಮೋಹಿತೆ, ಜಯವಂತ ಭಾಟಲೆ, ರಾಜು ಗುಂದೇಶಾ,ರವಿ ಕದಂ,ಅಭಿಜಿತ್ ಮುದಕುಡೆ, ಪ್ರಣವ ಮಾನವಿ, ಬಂಡಾ ಘೋರ್ಪಡೆ, ಸೂರಜ್ ಖವರೆ, ವಿಜಯ ಟವಳೆ, ಆಶಾ ಟವಳೆ, ಪ್ರಶಾಂತ ಕೆಸ್ತಿ,ಶ್ರೇಯಸ ಅಮಲೆ,ಶ್ರೀನಿವಾಸ ಚವ್ಹಾಣ, ಮಲ್ಲಿಕಾರ್ಜುನ ಜೋಗಡಿ, ಸಾಯಿನಾಥ ಖೋತ, ರೋಹಿತ ಪಾಟೀಲ,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours