“ಚಿಂಚಣಿ ಗ್ರಾಮದಲ್ಲಿ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜ್ರಂಬನೆಯಿಂದ ಜರುಗಿತು”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ತಾಲೂಕಿನ ಚಿಂಚಣಿ ಗ್ರಾಮದಲ್ಲಿ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜ್ರಂಬನೆಯಿಂದ ಜರುಗಿತು.
ಚಿಂಚಣಿ ಗ್ರಾಮದ ರಾಮಲಿಂಗೇಶ್ವರ ಜಾತ್ರೆಯು ನೂರಾರು ವರುಷಗಳಿಂದ ಜರುಗುತ್ತ ಬಂದಿದೆ, ಪ್ರತಿ ವರ್ಷದಂತೆ, ಗ್ರಾಮದಲ್ಲಿ ರಾಮಲಿಂಗೇಶ್ವರ ಪೂಜಾ ವಿಧಿ ವಿಧಾನಗಳು ನಡೆದವು, ಪಲ್ಲಕ್ಕಿ-ಅಂಬಲಿ ಬಿಂದಿಗೆಗಳ ಮೆರವಣಿಗೆ, ವಾದ್ಯ ಮೇಳಗಳೊಂದಿಗೆ ನಡೆಯಿತು, ಜಾತ್ರಾ ಮಹೋತ್ಸವಕ್ಕೆ ಚಿಕ್ಕೋಡಿಯ ಸಂಪಾದನಾ ಮಹಾ ಸ್ವಾಮೀಜಿಯವರ ಆಗಮನದಿಂದ ಭಕ್ತರಲ್ಲಿ ಒಂದು ವಿಶೇಷ ಹುಮ್ಮಸ್ಸು ಮೂಡಿತು, ಮದ್ಯಾಹ್ನ ಮುತೈದೆಯರ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಾಪ್ರಸಾದ ಜರುಗಿತು, ಸಾವಿರಾರು ಭಕ್ತರು ರಾಮಲಿಂಗನ ದರ್ಶನ ಪಡೆದು ಪುಣಿತರಾದರು.
ಚಿಂಚಣಿ ಗ್ರಾಮದ ಮುಖಂಡರಾದ, ಅಕ್ಷಯ ಪಾಟೀಲ ಮುದ್ದಪ್ಪಗೋಳ, ಅಭಯ ಪಾಟೀಲ, ಚಂದ್ರಕಾಂತ ಹುಕ್ಕೇರಿ, ಮಲಗೌಡಾ ಧರನಗುತ್ತೆ, ಸುನೀಲ ಗುರವ, ಸಮೀರ ನಾಯಿಕ, ತಮ್ಮಣ್ಣಿ ನೀಲಪ್ಪಗೋಳ, ಕೃಷ್ಣಕುಮಾರ ಚವ್ಹಾನ, ದೀಪಕ ಮುದ್ದಪ್ಪಗೋಳ, ಜನಾರ್ಧನ ನಾಯಿಕ, ಶಿವಶಾಂತ ಮಂಗಸೂಳೆ, ಕಲ್ಲಪ್ಪಾ ಭೋಸಲೆ, ರಾಖೇಶ ಚಿಂಚಣೆ, ಆನಂದ ಗುರವ, ಬಾಬಯ್ಯಾ ಹಿರೇಮಠ, ರಮೇಶ ಗುರವ, ಭೀಮಗೌಡಾ ಮುದ್ದಪ್ಪಗೋಳ, ಈರಗೌಡಾ ಚೊಂಚಣ್ಣವರ, ಸಂಜಯ ಪಾಟೀಲ ಚಿಕಲೆ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು..


Share with Your friends

You May Also Like

More From Author

+ There are no comments

Add yours