ಪತಿಯ ಹತ್ಯೆಯ ಕೃತ್ಯವನ್ನು ಪತ್ನಿ ವಿಡಿಯೋ ಕಾಲ್ ನಲ್ಲಿ ನೋಡಿದ್ದಳು ಅಲ್ಲದೆ ಪತಿ ಶಿವನಗೌಡ ಕೊಲೆಯ ದಿನ ಪತ್ನಿ ಶೀಲಾ ಕಣ್ಣೀರಿಟ್ಟು ನಾಟಕ ವಾಡಿದ ಪತ್ನಿ

ಬೆಳಗಾವಿ :–

ಜಿಲ್ಲೆಯ ಖಾನಾಪುರದ ಗಾಡಿಕೊಪ್ಪದಲ್ಲಿ ಈ ಒಂದು ಭೀಕರ ಕೊಲೆ ನಡೆದಿತ್ತು. ಏಪ್ರಿಲ್ 2 ರಂದು ಶಿವನಗೌಡ ಪಾಟೀಲ್ ಎನ್ನುವ ವ್ಯಕ್ತಿಯ ಬರ್ಬರ ಹತ್ಯೆ ಆಗಿತ್ತು. ಶಿವನಗೌಡನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.ರುದ್ರಪ್ಪ ಹೊಸೆಟ್ಟಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ.

ಎರಡು ವರ್ಷಗಳಿಂದ ರುದ್ರಪ್ಪನ ಜೊತೆಗೆ ಶೈಲಾ ಅನೈತಿಕ ಸಂಬಂಧ ಹೊಂದಿದ್ದಳು. ಆರು ತಿಂಗಳ ಹಿಂದೆ ಈ ವಿಷಯ ಬೆಳಕಿಗೆ ಬಂದಿದ್ದು, ಇದರಿಂದ ಪತಿ ಶಿವನಗೌಡ ಆತನ ಸಹವಾಸ ಬಿಡು ಎಂದು ಬುದ್ಧಿ ಹೇಳಿದ್ದ. ಈ ವೇಳೆ ರುದ್ರಪ್ಪ ಹೊಸೆಟ್ಟಿ ಶಿವನಗೌಡನನ್ನು ಕೊಂದಿದ್ದ. ತವರು ಮನೆಯಲ್ಲಿ ಪತ್ನಿಯನ್ನು ಬಿಟ್ಟು ಶಿವನಗೌಡ ವಾಪಾಸ್ ಬರುತ್ತಿದ್ದ. ಇದೆ ಸಂದರ್ಭದಲ್ಲಿ ರುದ್ರಪ್ಪ ಆತನಿಗೆ ಕರೆ ಮಾಡಿ ಪಾರ್ಟಿ ಮಾಡಲು ಕರೆಸಿಕೊಂಡಿದ್ದ. ಆತನಿಗೆ ಮದ್ಯ ಕುಡಿಸಿ ಬಳಿಕಶಿವನಗೌಡನನ್ಈ

ಈ ವೇಳೆ ಪತಿಯ ಹತ್ಯೆಯ ಕೃತ್ಯವನ್ನು ಪತ್ನಿ ಶೈಲಾ ಪಾಟೀಲ್ ವಿಡಿಯೋ ಕಾಲ್ ನಲ್ಲಿ ನೋಡಿದ್ದಾಳೆ. ಅಲ್ಲದೆ ಪತಿ ಶಿವನಗೌಡ ಕೊಲೆಯ ದಿನ ಪತ್ನಿ ಶೀಲಾ ಕಣ್ಣೀರಿಟ್ಟು ನಾಟಕ ವಾಡಿದಳು. ಗೋಡಾಡಿ ಕಣ್ಣೀರಿಟ್ಟು ಪ್ರಕರಣವನ್ನು ಡೈವರ್ಟ್ ಮಾಡಿದ್ದಳು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು. ಸಂಶಯ ಬಂದು ಶೈಲಾ ಮೊಬೈಲ್ ಕಾಲ್ ಹಿಸ್ಟರಿ ಚೆಕ್ ಮಾಡಿದಾಗ ಈ ಒಂದು ಸುಪಾರಿ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಶೈಲಾ ಪಾಟೀಲ್ ಳನ್ನು ಖಾನಾಪುರ ಪೊಲೀಸರು ಬಂಧಿಸಿ ಇದೀಗ ಜೈಲಿಗೆ ಅಟ್ಟಿದ್ದಾರೆ.

Share this post:

Leave a Reply

Your email address will not be published. Required fields are marked *