ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೊಡಿ :–
ವಿಶ್ವಯೋಗ ದಿನಾಚರಣೆ
ಯೋಗಾಭ್ಯಾಸದಿಂದ ಜೀವನ ಸರಳ ಸುಂದರವಾಗಿಸಿಕೊಳ್ಳಿಸಿರಿ ಎಂದು ಕೆ ಎಲ್ ಇ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಢಾ. ಕಿರಣ ಮುತ್ನಾಳಿ ಮಾತನಾಡುತ್ತಿದ್ದರು. ಅವರು ಇಂದು ನಗರದ ಕೆ ಎಲ್ ಇ ಆಯುರ್ವೇದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಯೋಗ ದಿನಾಚರಣೆಯ ಅಂಗವಾಗಿ ಮಾತನಾಡುತ್ತಿದ್ದರು. ಯೋಗವು ದೇಶದ ಋಷಿಮುಣ ಗಳು ವಿಶ್ವಕ್ಕೆ ಕೊಟ್ಟ ಕೊಡುಗೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು. ಯೋಗ ನಮ್ಮ ಸರ್ವಾಂಗಗಳಿಗೆ ನವ ಚೈತನ್ಯವನ್ನು ನೀಡುತ್ತದೆ. ಅದರಲ್ಲೂ ನಮ್ಮಲ್ಲಿರಬಹುದಾದ ಭಯ ಆತಂಕ ಸಿಟ್ಟುಗಳನ್ನು ಹತೋಟಿಯಲ್ಲಿಟ್ಟು ಮನೋಸ್ಥೆರ್ಯವನ್ನು ಹೆಚ್ಚಿಸಿಕೊಂಡು ಅಪ್ರತಿಮ ಆತ್ಮವಿಶ್ವಾಸವನ್ನು ಕಂಡುಕೊಳ್ಳಲು ಯೋಗಾಭ್ಯಾಸವು ಅತ್ಯುತ್ತಮ ಚಿಕಿತ್ಸೆಯಾಗಿದೆ. “ಪ್ರತಿ ಮನೆ ಅಂಗಳದಲ್ಲಿ ಯೋಗ” ಎಂಬುದು ಈ ವರ್ಷದ ಘೋಷವಾಖ್ಯವಾಗಿದೆ. ಅದರಂತೆ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಯುತ ಜೀವನ ನಡೆಸೋಣ ಹಾಗೂ ಯೋಗದಿನಾಚರಣೆಯು ಕೇವಲ ಒಂದು ದಿನ ಮಾಡಿದರೆ ಮಾತ್ರ ಸಾಲದು ಅದು ನಮ್ಮ ದಿನಚರಿಯಲ್ಲಿ ಒಂದಾಗಬೇಕು ಅಂದಾಗಲೇ ಈ ದಿನ ಸಾರ್ಥಕತೆಯನ್ನು ಪಡೆಯುವದು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಸ್ಥವೃತ್ತ ಮತ್ತು ಯೋಗ ವಿಭಾಗದ ವೈದ್ಯರಾದ ಡಾ. ಜೀವನಕುಮಾರ ಗಡಗೆ ಅವರು ಕಾರ್ಯಕ್ರಮದಲ್ಲಿ ಯೋಗಾಭ್ಯಾಸ ಮಾಡಿಸಿದರು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
+ There are no comments
Add yours