ಬೆಳಗಾವಿ :–
ಕಾಗವಾಡ ತಾಲುಕಿನ ಶಿರಗುಪ್ಪಿ ಗ್ರಾಮದ ಐವರು ಸ್ನೇಹಿತರು ಊಟಿ, ಕೊಡಗು ಪ್ರವಾಸ ಮುಗಿಸಿ ಬೆಳಗಾವಿಗೆ ಕಾರಿನಲ್ಲಿ ಮರಳುತ್ತಿದ್ದರು
ಗ್ರಾಮದ ಐವರು ಸ್ನೇಹಿತರು ಊಟಿ, ಕೊಡಗು ಪ್ರವಾಸ ಮುಗಿಸಿ ಬೆಳಗಾವಿಗೆ ಕಾರಿನಲ್ಲಿ ಮರಳುತ್ತಿದ್ದರು. ಮುಂಬೈನಿಂದ ಮೈಸೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಅತ್ತಿಗೆರೆ ಸಮೀಪ ಎದುರಾಗಿದೆ. ಅತಿ ವೇಗದಲ್ಲಿದ್ದ ವಾಹನಗಳು ಮುಖಾಮುಖಿಯಾಗಿ ಡಿಕ್ಕಿಯಾಗಿವೆ.
ವಿಜಯ್ ಭಜಂತ್ರಿ (30), ಬಸವರಾಜ ಐಬತ್ತಿ (30) ಹಾಗೂ ಶ್ರೀಧರ ವಡ್ಡರ (27) ಮೃತಪಟ್ಟವರು. ವಿಶ್ವನಾಥ್ ಈರೇಗೌಡ (30) ಹಾಗೂ ರಾಜು ಕಾಟಕರ್ (30) ಗಾಯಗೊಂಡಿದ್ದು ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ಸಿನಲ್ಲಿದ್ದ 11 ಪ್ರಯಾಣಿಕರು ಇಬ್ಬರು ಚಾಲಕರು ಸುರಕ್ಷಿತವಾಗಿದ್ದಾರೆ’ ಎಂದು ಮಾಯಕೊಂಡ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ದಾವಣಗೆರೆ ತಾಲ್ಲೂಕಿನ ಅತ್ತಿಗೆರೆ ಗ್ರಾಮದ ಬಳಿ ಘಟನೆ ಮೃತರು ಕಾಗವಾಡ ತಾಲ್ಲೂಕಿನ ಶಿರಗುಪ್ಪಿದವರು. ಮೃತ ದೇಹಗಳನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆ ಗೆ ರವಾನೆ ಮಾಡಲಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮುಂದಿನ ತನಿಖೆ.