ಬೆಳಗಾವಿ :–
ಬಿಮ್ಸ್ ಆಸ್ಪತ್ರೆ ಎಮರ್ಜೆನ್ಸಿ ವಾರ್ಡ್ ನಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು.
ಇದರಿಂದ ವೈದ್ಯರು ಮೊಬೈಲ್ ಟಾರ್ಚ್ ಹಿಡಿದುಕೊಂಡು ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿಯ ಎದುರಾಯಿತು.
ರೋಗಿಗಳು ಮೊಬೈಲ್ ಟಾರ್ಚ್ ಹಿಡಿದುಕೊಂಡೇ ಬೆಡ್ ಮೇಲೆ ಮಲಗಿದ್ದರು. ರೋಗಿಗಳ ಸಂಬಂಧಿಕರು ಬಿಮ್ಸ್ ನ ಸಿಬ್ಬಂದಿಗಳಿಗೆ ಮೊಬೈಲ್ ಮೂಲಕ ಸಂಪರ್ಕಿಸಿ
ವಿದ್ಯುತ್ ಆನ್ ಮಾಡುವಂತೆ ಕೇಳಿಕೊಳ್ಳುತ್ತಿದ್ದರು. 20 ನಿಮಿಷಗಳ ಕಾಲ ವಿದ್ಯುತ್ ವ್ಯತ್ಯಯದಿಂದ ಭಾರಿ ಸಮಸ್ಯೆ ಎದುರಾಯಿತು