ಚಿಕ್ಕೋಡಿ :–
*ಜನತೆಯ ಆಶೀರ್ವಾದ ಸದಾ ಇರುವಾಗ, ಅಭಿವೃದ್ಧಿಯ ದಾರಿ ನಿರಂತರ ಮುಂದುವರಿಯಲಿದೆ *
ಸದಲಗಾ ಪಟ್ಟಣದಲ್ಲಿ 14.25 ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ.
ಇಂದು ಸದಲಗಾ ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ನೀಡಸೋಸಿ ಮಠದ ಪ.ಪೂ. ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ, ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶ್ರೀ ಪ್ರಕಾಶ ಅಣ್ಣಾ ಹುಕ್ಕೇರಿ ಮತ್ತು ಶಾಸಕರಾದ ಶ್ರೀ ಗಣೇಶ ಅಣ್ಣಾ ಹುಕ್ಕೇರಿ ಅವರ ನೇತೃತ್ವದಲ್ಲಿ ₹14.25 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ಇದೊಂದು ಮಹತ್ವದ ಹೆಜ್ಜೆಯಾಗಿ, ಸದಲಗಾ ಹಾಗೂ ಸುತ್ತಮುತ್ತಲ ಹಳ್ಳಿಗಳ ಅಭಿವೃದ್ಧಿಗೆ ನಾಂದಿಯಾಗಲಿದೆ. ಉತ್ತಮ ರಸ್ತೆ ಸಂಪರ್ಕದಿಂದ ಸ್ಥಳೀಯರ ಸಂಚಾರ ಸುಲಭವಾಗುವುದು ಮಾತ್ರವಲ್ಲದೆ, ವ್ಯಾಪಾರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೂ ಮತ್ತಷ್ಟು ಬಲ ನೀಡಲಿದ್ದು, ಈ ಪ್ರದೇಶದ ಸಮಗ್ರ ಬೆಳವಣಿಗೆಗೆ ಇದು ಮಾದರಿಯಾದುದು.
ಈ ವೇಳೆ ಸ್ಥಳೀಯ ಮುಖಂಡರು, ಸದಲಗಾ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.