ಟಾಯ್ಲೆಟ್ ಸೀಟಿಗಿಂತಲೂ ಮೊಬೈಲ್‌ನಲ್ಲಿ 10 ಪಟ್ಟು ಮತ್ತು ತರಕಾರಿ ಕತ್ತರಿಸುವ ಬೋರ್ಡ್‌ನಲ್ಲಿ 200 ಪಟ್ಟು ಹೆಚ್ಚು ಬ್ಯಾಕ್ಟಿರಿಯಾಗಳಿರುತ್ತವೆ ಎಂದು ಹಲವು ಅಧ್ಯಯನಗಳು ಹೇಳಿವೆ.
ಸಿಂಕ್‌ನಲ್ಲಿ ಬಳಸುವ ಸ್ಪಂಜ್ 450 ಮಿಲಿಯನ್ ಬ್ಯಾಕ್ಟಿರಿಯಾಗಳನ್ನು ಹೊಂದಿರಬಹುದು. ಹಲ್ಲುಜ್ಜುವ ಬ್ರಷ್ ಪ್ರತಿ ಇಂಚಿಗೆ 2,00,000 ಬ್ಯಾಕ್ಟಿರಿಯಾಗಳನ್ನು ಹೊಂದಿರುತ್ತದೆ. ದಿಂಬಿನ ಕವರ್, ಸ್ವಿಚ್, ಫ್ರಿಡ್ಜ್ ಹ್ಯಾಂಡಲ್, ಕಂಪ್ಯೂಟರ್ ಕೀಬೋರ್ಡ್, ರಿಮೋಟ್, ಬಾಗಿಲಿನ ಗುಂಡಿಯಲ್ಲೂ ಬ್ಯಾಕ್ಟಿರಿಯಾಗಳಿವೆ.