ಚಿಕ್ಕೋಡಿ :–
ತಾಲುಕಿನ ಯಕ್ಸಂಬಾ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪಟ್ಟಣದ ಹಾಗೂ ಅಕ್ಕ ಪಕ್ಕದ ಹಳ್ಳಿ ಗಳಿಂದ ಸುಮಾರು ರೋಗಿಗಳು ಚಿಕ್ಸಿತೆ ಗಾಗಿ ಬರುತ್ತಾರೆ.
ಇಹೊತ್ತು ಸೋಮವಾರ ಬೆಳಿಗ್ಗೆ 9 ಗಂಟೆಯಿಂದ ಸುಮಾರು 12 ಗಂಟೆವರೆಗೆ ರೋಗಿಗಳಿಗೆ ಚಿಕಿತ್ಸೆ ಕೊಡಲು ಯಾವೊಬ್ಬ ಡಾಕ್ಟರ್ ಸಹಿತ ಇಲ್ಲದೆ ಇರುವುದರಿಂದ ಹಲವು ಗ್ರಾಮಗಳಿಂದ ಚಿಕಿತ್ಸೆಗಾಗಿ ಬಂದ ಸುಮಾರು 45 ರಿಂದ 60 ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂಥ ಪರಸ್ಥಿತಿ ಉದ್ಭವ ವಾಗಿದೆ

ಚಿಕಿತ್ಸೆಗಾಗಿ ರೋಗಿಗಳು ಕಾದು ಕಾದು ಸುಸ್ತಾಗಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ಕೆಳಲು ಇಲ್ಲಿನ ವೈದ್ಯಾಧಿಕಾರಿಯಾದ, ಶಾಂತರಾಮ್ ಬಾಗೇವಾಡಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಸಂದೇಶ ಕಳಿಸಿದರು ಸಂದೇಶಕ್ಕೆ ಉತ್ತರಿಸುತ್ತಿಲ್ಲ ಇದರರ್ಥ ಏನು ? ರೋಗಿಗಳ ಜನರ ಕಷ್ಟ ಇವರಿಗೆ ಏನು ಸಂಬಂಧವಿಲ್ಲ ಎಂಬಂತೆ, ಮೇಲಾಧಿಕಾರಿಯಾದ,

ತಾಲೂಕ ಆರೋಗ್ಯ ಅಧಿಕಾರಿಯಾದ , ಸುಕುಮಾರ್ ಬಾಗಾಯಿ, ಇವರು ರಜೆ ಮೇಲಿದ್ದಾರೆ.
ಇನ್ನು ಎಸ್ ಎಸ್ ಗಡೇದ, ಎಡಿಎಚ್ ಒ ಇವರಂತು ಯಾವಾಗಲು ಮೀಟಿಂಗ್ ಬ್ಯುಸಿ ಫೋನ್ ಮಾಡಿದರೆ ಉತ್ತರಿಸುವುದೇ ಇಲ್ಲ.
ಈ ತರಹದ ಅಧಿಕಾರಿಗಳು ಆರೋಗ್ಯ ಇಲಾಖೆಯಲ್ಲಿ ಇದ್ದಾರೆ ಎಂಬುದು ವಿಪರ್ಯಾಸದ ಸಂಗತಿ.
ಸದರಿ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಅನುಕೂಲ ವಾಗಲೆಂದು ಕರ್ನಾಟಕ ಸರ್ಕಾರದ ದೆಹಲಿಯ ವಿಷೇಶ ಪ್ರತಿನಿಧಿ,ಪ್ರಕಾಶ ಹುಕ್ಕೇರಿ ಹಾಗೂ ಚಿಕ್ಕೋಡಿ- ಸದಲಗಾ ಕ್ಷೇತ್ರದ ಶಾಸಕರಾದ ಗಣೇಶ್ ಹುಕ್ಕೇರಿ ರವರ ವಿಶೇಷ ಪ್ರಯತ್ನದಿಂದ ವಿಶೇಷ ತಜ್ಞ ವೈದ್ಯರ ಸೌಲಭ್ಯ ದೊರೆಯುವಂತೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಸಾರ್ವಜನಿಕರಿಗೆ ಅನುಕೂಲ ವಾಗುವ ಬದಲು ಇಂತಹ ವೈದ್ಯರು ಇರುವುದರಿಂದ ಅನಾನುಕೂಲತೆಯೇ ಜಾಸ್ತಿಯಾಗಿದೆ
ಇದು ಇವತ್ತು ಒಂದು ದಿನದ ಕಥೆಯಲ್ಲ “ದಿನಾಲು ಇದೇ ರಾಗ ಇದೆ ತಾಳ” ತರಹ ಸಮಯಕ್ಕೆ ಸರಿಯಾಗಿ ವೈದ್ಯರು ಬರುವುದಿಲ್ಲ ಎಂದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಮೇಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಸೂಕ್ತ ಕ್ರಮ ಜರುಗಿಸಿ ರೋಗಿಗಳ ಪರದಾಟ ತಪ್ಪಿಸಬೇಕೆಂದು ಅಗ್ರಹಿಸಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಸಹಿತ ವೈದ್ಯರ ಕಾಟಕ್ಕೆ ಬೆಸತಿದ್ದಾರೆ ಎಂದು ಹೇಳಲಾಗುತ್ತಿದೆ.