ಚಿಕ್ಕೋಡಿ :–
ಶಿವಶಂಕರ ಜೊಲ್ಲೆ ಇಂಗ್ಲಿಷ್ ಮೀಡಿಯಂ ಪಬ್ಲಿಕ್ ಶಾಲೆಯ ೧೦ನೇ ವರ್ಗದ ವಿದ್ಯಾರ್ಥಿಗಳು ಸನ್ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಸಿ.ಬಿ.ಎಸ್.ಇ ಬೋರ್ಡ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಒಟ್ಟು ೯೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಸಮೃದ್ಧಿ ಕೋಳೆಕರ ೯೦% ಪ್ರಥಮ, ಪಿಯುಷ್ ಸೂರ್ಯವಂಶಿ ೮೭.೪% ದ್ವಿತೀಯ, ಶಿಲ್ಪಾ ತಿಕುಟೆ ೮೭.೨% ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ ೨೬ ಉನ್ನತ ಶ್ರೇಣಿ, ೩೦ ಪ್ರಥಮ ದರ್ಜೆ, ೨೬ ದ್ವಿತೀಯ ದರ್ಜೆಗಳನ್ನು ಪಡೆಯುವುದರ ಮೂಲಕ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳ ಸಾಧನೆಯನ್ನು ಜೊಲ್ಲೆ ಗ್ರುಪ್‌ನ ಸಂಸ್ಥಾಪಕರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ, ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀಮತಿ ಶಶಿಕಲಾ ಜೊಲ್ಲೆ, ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಅಧ್ಯಕ್ಷರಾದ ಶ್ರೀ ಜ್ಯೋತಿಪ್ರಸಾದ ಜೊಲ್ಲೆ, ಮ್ಯಾಗ್ನಂಟಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಬಸವಪ್ರಸಾದ ಜೊಲ್ಲೆ,
ಸಂಸ್ಥೆಯ ನಿರ್ದೇಶಕರು, ಪ್ರಾಚಾರ್ಯರಾದ ಶ್ರೀ ಪ್ರಕಾಶ ಎಸ್, ಸಂಸ್ಥೆಯ ಸಮನ್ವಯ ಅಧಿಕಾರಿಯಾದ ಶ್ರೀ ಮಹಾದೇವ ಪಾಟೀಲ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಗಳ ಜೊತೆಗೆ ಭವಿಷ್ಯತ್ತಿನ ಶಿಕ್ಷಣಕ್ಕೆ ಶುಭ ಹಾರೈಸಿದ್ದಾರೆ.