“ಭಾರತೀಯ ಯೋಧರಿಗೆ ಸ್ಥೈರ್ಯ ತುಂಬಲು ನಿಪ್ಪಾಣಿಯಲ್ಲಿ ತಿರಂಗಾ ಯಾತ್ರೆ”

ನಿಪ್ಪಾಣಿ :–

ಪೆಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಹೆಮ್ಮೆಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಹಾಗೂ ಪಕ್ಷದ ಕರೆಯ ಮೇರೆಗೆ ದೇಶಾದ್ಯಂತ ತಿರಂಗಾ ಯಾತ್ರೆ ಆಯೋಜಿಸಿರುವ ಹಿನ್ನೆಲೆಯಲ್ಲಿ

ನಗರದಲ್ಲಿ ಪ.ಪೂ.ಶ್ರೀ ಪ್ರಾಣಲಿಂಗ ಸ್ವಾಮೀಜಿ,ಶ್ರೀ ಅರುಣಾನಂದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರ ಮಾರ್ಗದರ್ಶನದಲ್ಲಿ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಶ್ರೀ. ಬಸವಪ್ರಸಾದ ಜೊಲ್ಲೆ ಯವರು ಹಾಗೂ ದೇಶಭಕ್ತರು ವೀರ ಯೋಧರಿಗೆ ಕೃತಜ್ಞತೆ ಸಲ್ಲಿಸಿದರು.

ಶತ್ರು ರಾಷ್ಟ್ರದ ಹುಟ್ಟಡಗಿಸಿದ ಭಾರತೀಯ ಸೇನೆ ಆಪರೇಷನ್ ಸಿಂಧೂರ ಮೂಲಕ ಇಡೀ ವಿಶ್ವಕ್ಕೆ ಭಾರತದ ಶಕ್ತಿಶಾಲಿತ್ವವನ್ನು ತೋರಿಸಿದೆ.ನಮ್ಮ ಸೇನೆಯ ಸೈನಿಕರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ‘ರಾಷ್ಟ್ರ ರಕ್ಷಣೆಗಾಗಿ ನಾವೆಲ್ಲರೂ’ ಎಂಬ ಘೋಷವಾಕ್ಯದಡಿ ತಿರಂಗಾ ಯಾತ್ರೆ ನಡೆಯಿತು.ಈ ವೇಳೆ,ನಿವೃತ್ತ ಯೋಧರು,ವಕೀಲರು,

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು,ಆಶಾ ಕಾರ್ಯಕರ್ತರು ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರುಗಳ ನೇತೃತ್ವದಲ್ಲಿ “ವಂದೇ ಮಾತರಂ” ಜಯಘೋಷ ಮೊಳಗಿತು.

Share this post:

Leave a Reply

Your email address will not be published. Required fields are marked *

Category
Lorem ipsum dolor sit amet, consectetur adipiscing elit eiusmod tempor ncididunt ut labore et dolore magna

You cannot copy content of this page