ಚಿಕ್ಕೋಡಿ :–
“ವಿದ್ಯುತ್ ಕಂಬ ದುರಸ್ತಿಗೊಳಿಸಲು ಒತ್ತಾಯ”
ತಾಲುಕಿನ ಅಂಕಲಿ ಗ್ರಾಮದ ಶಿವ ದೇವಾಲಯದಿಂದ ಕಾಡಾಪುರ ಗ್ರಾಮಕ್ಕೆ ಹೋಗುವ ರಸ್ತೆ ಮಾರ್ಗದ ವಿದ್ಯುತ್ ಕಂಬ ಬೀಳುವ ಹಂತದಲ್ಲಿದ್ದು ಅನಾಹುತಗೊಳ್ಳುವ ಮೊದಲೆ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶಿವಾಲಯ ಮತ್ತು ಕೆಎಲ್‌ಇ ಶಾಲೆಯ ಹಿಂಭಾಗದಲ್ಲಿರುವ ಕಾಡಾಪುರ ರಸ್ತೆಯ ಬಳಿಯ ವಿದ್ಯುತ್ ಕಂಬ ಬೀಳುವ ಹಂತ ತಲುಪಿದೆ. ಸ್ಥಳೀಯ ನಿವಾಸಿಗಳು ಪದೇ ಪದೇ ವರದಿ ಮಾಡಿದರೂ ಹೆಸ್ಕಾಂ ಇಲಾಖೆಯವರು ನಿರ್ಲಕ್ಷ್ಯ ತೋರಿದ್ದಾರೆ, ಈ ಸಮಸ್ಯೆ ಕುರಿತು ತಲೆ ಕೆಡಿಸಿಕೊಂಡಿಲ್ಲ.
ಈ ರಸ್ತೆಯ ಮಾರ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಾರೆ.
ರೈತರು ಮತ್ತು ಸಾರ್ವಜನಿಕರು ಸಂಚರಿಸುವ ಪ್ರಮುಖ ರಸ್ತೆಯಾಗಿದ್ದು ಮಳೆಗಾಲ ಪ್ರಾರಂಭವಾಗಿದೆ.
ಮಳೆಯಿಂದಾಗಿ ಕಂಬ ಮತ್ತಷ್ಟು ಬಾಗುತ್ತಿದೆ. ಯಾವುದೇ ಅನಿರೀಕ್ಷಿತ ಘಟನೆ ಸಂಭವಿಸುವ ಮೊದಲು ಹೆಸ್ಕಾಂ ಈ ಸಮಸ್ಯೆಯ ಬಗ್ಗೆ ಗಮನ ಹರಿಸಿ ಅದನ್ನು ದುರಸ್ತಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.





