ಯುಎಸ್ನ ನೆವಾಡಾದ ಮರುಭೂಮಿ ಯಲ್ಲಿರುವ
ರಿಪಬ್ಲಿಕ್ ಆಫ್ ಮೊಲೊಸಿಯಾ ದಲ್ಲಿ ಕೇವಲ 33 ಜನರಿದ್ದು, ಇದು ಪ್ರತ್ಯೇಕವಾದ ಕರೆನ್ಸಿಯನ್ನೂ ಹೊಂದಿದೆ.
ಇದನ್ನು ರಾಷ್ಟ್ರವೆಂದು ಇತರ ಯಾವುದೇ ದೇಶ ಅಥವಾ ಅಂತಾರಾಷ್ಟ್ರೀಯ ಸಂಸ್ಥೆಗಳು ಅಧಿಕೃತವಾಗಿ ಗುರುತಿಸಿಲ್ಲ, ಪರಿಗಣಿಸಿಲ್ಲ.
ಏನೂ ಆದರೂ, ಇದು ತನ್ನ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ಸಂವಿಧಾನವನ್ನು ಹೊಂದಿದೆ.
ಇದನ್ನು 1977ರಲ್ಲಿ ಕೆವಿನ್ ಬಾಗ್ ಮತ್ತು ಸ್ನೇಹಿತರು ಸೇರಿ ನಿರ್ಮಿಸಿದ್ದು, ಕೆವಿನ್ ಈ ದೇಶದ ಅಧ್ಯಕ್ಷರಾಗಿದ್ದಾರೆ. ಇಲ್ಲಿ ಈರುಳ್ಳಿ ನಿಷೇಧಿಸಲಾಗಿದೆ.