“ಚಿಕ್ಕೋಡಿ ಜಿಲ್ಲೆ ಆಗಬೇಕೆಂದು ಅಧಿವೇಶನದಲ್ಲಿ ಬೇಡಿಕೆ ಇಡಬೇಕೆಂದು ಚಿಕ್ಕೋಡಿ-ಸದಲಗಾ ಶಾಸಕರಾದ ಗಣೇಶ ಹುಕ್ಕೇರಿ ಇವರಿಗೆ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಒತ್ತಾಯ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಚಿಕ್ಕೋಡಿ ಜಿಲ್ಲೆ ಆಗಬೇಕೆಂದು ಸೋಮವಾರದಿಂದ ನಡೆಯುವ ಅಧಿವೇಶನದಲ್ಲಿ, ನಿಂತು ಬೇಡಿಕೆ ಇಡಬೇಕೆಂದು ಚಿಕ್ಕೋಡಿ-ಸದಲಗಾ ಶಾಸಕರಾದ ಗಣೇಶ ಹುಕ್ಕೇರಿ ಇವರಿಗೆ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಸದಸ್ಯರು ಒತ್ತಾಯಿಸಿದರು. ರವಿವಾರ ಶಾಸಕರ ಮನೆಗೆ ಹೋಗಿ ಅವರ ಹತ್ತಿರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು, ಮನವಿಯಲ್ಲಿ ವಿನಂತಿಸಿದ್ದು ಕರ್ನಾಟಕ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗಬೇಕು,

ಚುನಾವಣೆ ಪೂರ್ವದಲ್ಲಿ ಮುಖ್ಯ ಮಂತ್ರಿಗಳು ಚಿಕ್ಕೋಡಿಗೆ ಪ್ರಚಾರಕ್ಕಾಗಿ ಆಗಮಿಸಿದ್ದಾಗ, ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಚಿಕ್ಕೋಡಿ ಜಿಲ್ಲೆಯನ್ನು ಮಾಡುತ್ತೇವೆ ಎಂದು ಸಿದ್ಧರಾಮಯ್ಯನವರು, ಪ್ರಕಾಶ ಹುಕ್ಕೇರಿ ಮತ್ತು ಗಣೇಶ ಹುಕ್ಕೇರಿ ಎಲ್ಲರೂ ಸಾರ್ವಜನಿಕ ಸಭೆಯಲ್ಲಿ ಹೇಳಿರುವಿರಿ, ಆದರೆ ನುಡಿದಂತೆ ನಡೆಯದೇ ಇರುವುದು ಚಿಕ್ಕೋಡಿ ಭಾಗದ ಜನರಿಗೆ ಅಸಮಾಧಾನ ಉಂಟು ಮಾಡಿದೆ, ಚಿಕ್ಕೋಡಿ ಭಾಗದಲ್ಲಿ ಎಲ್ಲ ತರದ ಮೂಲಭೂತ ಸೌಕರ್ಯಗಳೂ ಸಹ ಇವೆ. ಇದಲ್ಲದೆ ಇಲ್ಲಿ ಜಿಲ್ಲಾ ಮಟ್ಟಕ್ಕೆ ಬೇಕಾಗುವ ಎಲ್ಲ ಕಚೇರಿಗಳೂ ಸಹ ಕಾರ್ಯ ನಿರ್ವಹಿಸುತ್ತಿವೆ.

ಚಿಕ್ಕೋಡಿ ಜಿಲ್ಲೆಯಾಗಬೇಕೆಂದು ಕಳೆದ 2-3 ದಶಕಗಳಿಂದ ಹೋರಾಟ ನಡೆದಿದೆ. ಪ್ರತಿಯೊಂದು ರಾಜಕೀಯ ಪಕ್ಷಗಳು ಚುನಾವಣೆಯ ಪೂರ್ವ ಚಿಕ್ಕೋಡಿ ಜಿಲ್ಲೆ ಮಾಡುತ್ತೇವೆ ಎಂದು ಆಶ್ವಾಸನೆಗಳನ್ನು ಮಾತ್ರ ಕೊಡುತ್ತಾ ಬಂದಿದ್ದಾರೆ. ಆದರೆ ಇಲ್ಲಿಯವರೆಗೆ ಈ ವಿಷಯದ ಬಗ್ಗೆ ಯಾವುದೇ ನಿರ್ಣಯವಾಗಿಲ್ಲ. 20-25 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಚಿಕ್ಕೋಡಿಯನ್ನು ಜಿಲ್ಲೆಯಾಗಿ ಘೋಷಣೆ ಮಾಡುವುದು ಪ್ರಮುಖವಾಗಿದೆ. ಚಿಕ್ಕೋಡಿ ಜಿಲ್ಲೆಗಾಗಿ ಸ್ವಾಮೀಜಿಗಳು, ಸಂಘಸಂಸ್ಥೆಗಳು, ನ್ಯಾಯವಾದಿಗಳು, ಹಿರಿಯರು, ಮುಖಂಡರು ಸಾಕಷ್ಟು ಸಲ ಒತ್ತಾಯಿಸಿದ್ದಾರೆ, ಆದರೆ ಯಾವೊಬ್ಬ ಜನಪ್ರತಿನಿಧಿಯೂ ಸಹ ಚಿಕ್ಕೋಡಿ ಜಿಲ್ಲೆ ಮಾಡಲು ಆಸಕ್ತಿ ತೋರದೇ ಇರುವುದು ಖಂಡನೀಯವಾಗಿದೆ,

ಕೂಡಲೇ ಚಿಕ್ಕೋಡಿ ಜಿಲ್ಲೆ ಘೋಷಣೆ ಆಗಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಒಬ್ಬ ಆನಂದಸಿಂಘ ಶಾಸಕರು ಸರಕಾರದ ಮೇಲೆ ಒತ್ತಡ ಹಾಕಿ ಕೇವಲ 10 ಲಕ್ಷ ಜನಸಂಖ್ಯೆ ಇರುವ, ವಿಜಯ ನಗರ ಜಿಲ್ಲೆಯನ್ನು ಮಾಡಿಸಿಕೊಂಡರು, ಬೆಳಗಾವಿ ಜಿಲ್ಲೆಯಲ್ಲಿ 50 ಲಕ್ಷಕ್ಕೆ ಮೀರಿ ಜನಸಂಖ್ಯೆ ಇದೆ ಆದರೂ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಆಗದೇ ಇರುವುದು ಜನರಿಗೆ ಅನ್ಯಾಯವಾಗುತ್ತಿದೆ, ತಾವುಗಳು ಸದನದಲ್ಲಿ ನಿಂತು ಗಂಭೀರವಾಗಿ ಸರಕಾರಕ್ಕೆ ಒತ್ತಾಯಮಾಡಬೇಕು ಎಂದು ಹೇಳಿದರು, ಮನವಿಯನ್ನು ಸ್ವೀಕರಿಸಿ ಮಾತನಾಡಿದ ಗಣೇಶ ಹುಕ್ಕೇರಿ ಈಗಾಗಲೇ ನಾನು ಮತ್ತು ಜಿಲ್ಲಾ ಉಸ್ತುವಾರಿಗಳು ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡಿದ್ದು, ಚಿಕ್ಕೋಡಿ ಜಿಲ್ಲೆ ಮಾಡಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು ಬಡಿಗೇರ, ಸದಸ್ಯರುಗಳಾದ ಬಸವರಾಜ ಸಾಜನೆ, ಅಮೂಲ ನಾವಿ, ರಫೀಕ ಪಠಾಣ, ರುದ್ರಯ್ಯಾ ಹಿರೇಮಠ, ಚಿದಾನಂದ ಶಿರೋಳೆ, ಖಾನಪ್ಪಾ ಬಾಡಕರ ಮುಂತಾದವರು ಉಪಸ್ಥಿತರಿದ್ದರು..


Share with Your friends

You May Also Like

More From Author

+ There are no comments

Add yours