ಚಿಕ್ಕೋಡಿ :–
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ಮಟ್ಟದಲ್ಲಿ ಹಲವಾರು ಸಮಸ್ಯೆಗಳು ಬರುತ್ತವೆ ಅವುಗಳನ್ನು ಎದುರಿಸಿ ಕೆಲಸ ನಿರ್ವಹಿಸಬೇಕು . ನನ್ನ ನಿವೃತ್ತಿ ನಂತರವೂ ನಿರಂತರವಾಗಿ ಸಾಮಾಜಿಕ ಸೇವೆ ಮಾಡುತ್ತೇನೆ ಎಂದು ರಘುನಾಥ ರಾಜಾಪೂರೆ ಯವರು ಹೇಳಿದರು.
ಪಟ್ಟಣದ ತಾಲೂಕ ಪಂಚಾಯತ ಸಂಭಾಂಗಣದಲ್ಲಿ ಪಂಚಾಯತ ರಾಜ್ಯ ಇಲಾಖೆಯ ಅಧಿಕಾರಿಗಳ ನಿವೃತ್ತಿ ಸನ್ಮಾನ ಸ್ವೀಕರಿಸಿ ಮಾತನಾಡಿದರು ಎಲ್ಲ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿಗಳು ಒತ್ತಡದಿಂದ ಕಲಸ ನಿರ್ವಹಿಸಬಾರದು. ಆರಾಮದಿಂದ ಕೆಲಸಗಳನ್ನು ಮಾಡಿ ಜನರಿಗಾಗಿ ತಮ್ಮ ಸೇವೆ ಮುಡುಪಾಗಿಡಿ ಗ್ರಾಮ ಪಂಚಾಯತಿ ಸಿಬ್ಬಂದಿಗಳು ನಮ್ಮವರೇ ಎಂದು ತಿಳಿದುಕೊಂಡು ಕೆಲಸಗಳನ್ನು ಮಾಡಿಕೊಳ್ಳಿ ಗ್ರಾಮ ಪಂಚಾಯತಿಗಳಲ್ಲಿ ಹಲವಾರು ಸಮಸ್ಯೆಗಳು ಬರುತ್ತವೆ ಅದಕ್ಕೆ ಅಂಜಿ ಆತ್ಮಹತ್ಯೆಗೆ ಶರಣಾಗಾಬಾರದು ಆ ಸಮಸ್ಯೆಗೆ ಪರಿಹಾರ ಏನು ಎಂದು ತಿಳಿದುಕೊಂಡು ಸೇವೆ ಸಲ್ಲಿಸಬೇಕೆಂದು ಹೇಳಿದರು .
ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎನ್.ವಣ್ಣೂರ ಅವರು ಮಾಡನಾಡಿ ಸರಕಾರಿ ಸೇವೆಯನ್ನು ಸಲ್ಲಿಸಿ ನಿವೃತ್ತಿ ಆಗುವುದು ಸುಲಭದ ಮಾತ ಅಲ್ಲ ಅವರ ಸಾಧನೆ ಹೆಚ್ಚಿದೆ ನಿವೃತ್ತಿ ಜೀವನವನ್ನು ಉತ್ತಮವಾಗಿ ಕಳೆಯಬೇಕೆಂದು ಹೇಳಿದರು. ಹಾಗೂ ನಿವೃತ್ತಿ ಹೊಂದಿದ ರಘುನಾಥ ರಾಜಾಪುರೆ ಮತ್ತು ಕಾರ್ಯದರ್ಶಿಯಾದ ವಿಠ್ಠಲ ಕುರಣೆರವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಎಸ್. ಎಸ್. ಮಠದ, ಶಿವಾನಂದ ಶಿರಗಾಂವೆ, ವ್ಯವಸ್ಥಾಪಕರಾದ ಉದಯಗೌಡಾ ಪಾಟೀಲ, ಸಹಾಯಕ ಲೆಕ್ಕ ಅಧಿಕಾರಿಗಳಾದ ರಾಜೆಂದ್ರ ಮೈಗೂರ, ತಾಲೂಕಾ ಯೋಜನಾಧಿಕಾರಿಗಳಾದ ರೇಖಾ ಮೇತ್ರಿ, ಹಾಗೂ ಪಂಚಾಯತ ಅಭಿವೃಧ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಎಸ್.ಡಿ.ಎ. ಸಿಬ್ಬಂದಿಗಳು ಮತ್ತು ತಾಲೂಕಾ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದರು.





