“ಸಂಧಿ ವಿವೇಕ ೨೦೨೫” ರಾಜ್ಯಮಟ್ಟದ ಆಯುರ್ವೇದ ಸಮ್ಮೇಳನ ಕಾರ್ಯಕ್ರಮ”

ಚಿಕ್ಕೋಡಿ :–

ಸಂಧಿವಾತ ಮತ್ತು ಕೀಲು ಸಂಬಂಧಿ ಕಾಯಿಲೆಗಳ ಆಧುನಿಕ ಮತ್ತು ಆಯುರ್ವೇದ ನಿರ್ವಹಣೆಯ ಕುರಿತು ಇಂದಿನ ಯುವ ವೈದ್ಯರಿಗೆ ಅರಿತುಕೊಳ್ಳಲು ವಿಚಾರ ಸಂಕಿರಣ ಉಪನ್ಯಾಸ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಜ್ಞಾನದ ಕಣಜಗಳಾಗಿವೆ. ಇವುಗಳ ಸದುಪಯೋಗ ಪಡೆದುಕೊಳ್ಳುವದು ಯುವ ವೈದ್ಯರ ಜವಾಬ್ದಾರಿಯಾಗಿವೆ ಎಂದು ಕೆ ಎಲ್ ಇ ಆಸ್ಪತ್ರೆಯ ಎಲಬು ಕೀಲು ತಜ್ಞರಾದ ಡಾ ಅಭಿಷೇಕ ರಾಯ್ಕರ ಅವರು ಹೇಳಿದರು,

ಅವರು ದಿನಾಂಕ ೫ನೇ ಜುಲೈ ೨೦೨೫ ರಂದು ಚಿಕ್ಕೋಡಿ ಕೆ ಎಲ್ ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ರೋಗನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗದ ಆಶ್ರಯದಲ್ಲಿ “ಸಂಧಿ ವಿವೇಕ ೨೦೨೫” ರಾಜ್ಯಮಟ್ಟದ ಆಯುರ್ವೇದ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದರು.
ಕಾಲೇಜಿನ ಪ್ರಾಚಾರ್ಯರು ಹಾಗೂ ವೈದ್ಯಕೀಯ ನಿರ್ದೇಶಕರಾದ ಡಾ.ಕಿರಣಕುಮಾರ ಮುತ್ನಾಳಿ ಮಾತನಾಡುತ್ತಾ ಈ ಸಮ್ಮೇಳನವು ಕೆ.ಎಲ್.ಇ ಸಂಸ್ಥೆಯ ಕಾರ್ಯಾದ್ಯಕ್ಷರಾದ ಡಾ.ಪ್ರಭಾಕರ್ ಬಿ.ಕೋರೆ ಅವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮವು ಸಂಧಿವಾತ ಮುಂತಾದ ಕಾಯಿಲೆಗಳಲ್ಲಿ ಆಯುರ್ವೇದದ ಪ್ರಾಮುಖ್ಯತೆ ಮತ್ತು ಸಮಗ್ರ ಚಿಕಿತ್ಸಾ ದೃಷ್ಟಿಕೋನದ ಅಗತ್ಯತೆಯ ಶ್ರೇ಼಼ಷ್ಠ ವೇದಿಕೆಯಾಗಿದೆ ಎಂದು ಹೇಳಿದರು.

ಸಂಧಿವಾತದ ರೋಗಗಳ ನಿರ್ವಹಣೆಯ ಕುರಿತು ವಿಚಾರ ಸಂಕಿರಣ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬೆಳಗಾವಿಯ ಡಾ.ಅರ್ಚನಾ ಉಪ್ಪಿನ್, (ಜನರಲ್ ಮೆಡಿಸಿನ್), ಪಿಡಿಸಿಸಿ (ರೆಮಟೋಲಾಜಿ), ಅವರು ಸಂಧಿವಾತದ ಆಧುನಿಕ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದರು.
ಡಾ. ಸಚೀನ ಖಟಕಲ್ಲೆ, ರೇಡಿಯಾಲಜಿಸ್ಟ್, ಅವರು ಸಂಧಿ ಸಂಬAಧಿ ಕಾಯಿಲೆಗಳ ಚಿತ್ರಣದ ಬಗ್ಗೆ ಉಪನ್ಯಾಸ ನೀಡಿದರು.
ಡಾ. ಶ್ರೀಹರಿ ಟಾಕಿಲ್ಕರ್, ಮ್ಯಾನೇಜರ್, ಫೈಟೋ ಫಾರ್ಮಾ ಅವರು ಸಂಧಿವಾತದ ಚಿಕಿತ್ಸೆಗೆ ರ¸ ಔಷಧಿಗಳ ತಯಾರಿ ಕುರಿತು ವಿವರಿಸಿದರು.
ಯಶವಂತ ಆಯುರ್ವೇದ ಕಾಲೇಜು, ಕೊಡೋಲಿಯ ಡಾ. ರವಿ ಪಾಟೀಲ್, ಪಂಚಕರ್ಮದಲ್ಲಿ ಸಂಧಿವಾತದ ಚಿಕಿತ್ಸಾ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಸಚಿನ ಗಣೇಶವಾಡಿ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಈ ಸಮ್ಮೇಳನವು ಯಶಸ್ವಿಯಾಗಿ ನಡೆಯಿತು. ಈ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಆಯುರ್ವೇದ ಮಹಾವಿದ್ಯಾಲಯಗಳಿಂದ ೪೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಡಿಯೋ ಮೂಲಕ ನೇರ ಪ್ರಸಾರ ಮಾಡಲಾಯಿತು. ಅಧ್ಯಾಪಕರು ಮತ್ತು ವೈದ್ಯರು ಭಾಗವಹಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ವಿಶಾಲ ಅವರು ನಿರೂಪಿಸಿದರು. ವೈಷ್ಣವಿ ಸ್ವಾಗತಿಸಿದರು, ಸೌಮ್ಯಾ ವಂದಿಸಿದರು. ಕಾರ್ಯಕ್ರಮದಲ್ಲಿ ಪೋಸ್ಟರ್ ಸ್ಪರ್ಧೆಯಲ್ಲಿ ವಿವಿಧ ಆಯುರ್ವೇದ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದರು.

Share this post:

Leave a Reply

Your email address will not be published. Required fields are marked *

You cannot copy content of this page