ಚಿಕ್ಕೋಡಿ :–
ಸರ್ವಶಿಷ್ಯ ಭಕ್ತರನ್ನು ಒಂದೇಭಾವದಿಂದ ನೋಡಿ ಜ್ಞಾನ ಉಪದೇಶ ನೀಡುವಾತನೆ ನಿಜವಾದ ಸದ್ಗುರು ಗುರುಮಾರ್ಗದಲ್ಲಿದು ಸದ್ಗುರುವಿನ ಮೇಲೆ ಪೂರ್ಣ ನಂಬಿಕೆ ಇಟ್ಟು ಪಾರಾಮಾರ್ಥದಲ್ಲಿ ತನ್ಮಯರಾಗಿ ಗುರುವಿನ ಸೇವೆ ಮಾಡಿದರೆ ಪರಮಾನಂದ ಪಾಪ್ತಿಯಾಗಿ ಮೋಕ್ಷದ ದಾರಿ ಪಾಪ್ತಿಯಾಗುತ್ತದೆ ಎಂದು ಅಥಿತಿಗಳಾಗಿ ಆಗಮಿಸಿದ ಶರಣರಾದ ವಿರೇಶ ಪಾಟೀಲ ಅಬಿವ್ಯಕ್ತಪಡಿಸಿದರು,
ಅವರು ಕಳೆದ ರವಿವಾರ 27 ರಂದು ತಾಲುಕಿನ ಧುಳಗನವಾಡಿಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಲಿಂ.ಸದ್ಗುರು ಬಸವಪ್ರಭು ಮಹಾರಾಜರ ನುಡಿ ಸ್ಮರಣೆಯಲ್ಲಿ ಮಾತನಾಡಿದರು ಸದ್ಗುರು ಬಸವಪ್ರಭು ಮಹಾರಾಜರು ಶಿಷ್ಯವೃಂದದಲ್ಲಿ ಭಕ್ತಿಯ ಬೀಜ ಬಿತ್ತಿ ಅಧ್ಯತ್ಮೀಕ ಸಸಿ ಬೆಳಿಸಿದಿರು ಅವರು ಎಂದೆಂದೂ ಭಕ್ತರ ಹೃದಯದಲ್ಲಿ ಸದಾ ಇರುವರೆಂದು ಬನ್ನಿಸಿದಿರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚನ್ನಮಲ್ಲಯ್ಯಾ ಮಠಪತಿ ವಹಿಸಿದರು ಮಾತೋಶ್ರೀ ಸಾವಿತ್ರಿ ಬಿ ಪಾಟೀಲ ಕಾರ್ಯಕ್ರಮ ಜ್ಯೋತಿಬೆಳಗಿಸಿ ಚಾಲನೆ ನೀಡಿದರು. ಶರತ ಪಾಟೀಲ, ಭರತ ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುರುಬಂಧುಗಳಾದ ಸುರೇಶ ಕಮತೆ, ಮಲ್ಲಪ್ಪಾ ಚಿಮಣೆ, ರಜಾಕ ಸುತಾರ, ಶಿವಗೌಡಾ ಕಮತೆ, ಆನಂದ ಕಮತೆ, ನುಡಿಸ್ಮರಣೆಯಲ್ಲಿ ಮಾತನಾಡಿದರು. ಕಪೀಲ ಚಿಮಣೆ, ವೀರಭದ್ರ ಕಮತೆ, ಅಣ್ಣಪ್ಪಾ ಜೋಡಟ್ಟಿ, ಉಪಸ್ಥಿತರಿದ್ದರು. ಅಂದು ಸಾಯಂಕಾಲ ಸದ್ಗುರು ಬಸವಪ್ರಭು ಮಹಾರಾಜರ ಭಾವಚಿತ್ರ ಗ್ರಾಮದ ಬೀದಿಗಳಲ್ಲಿ ವಾದ್ಯಮೇಳದೊಂದಿಗೆ ಜರುಗಿತು.
ಯಾದಗೂಡ, ನಾಯಿಂಗ್ಲಜ, ಕುಠಾಳಿ, ನವಲಿಹಾಳ, ಚಿಕ್ಕಲವಾಳ, ಯಾದಾನವಾಡಿ, ಮಜಲಟ್ಟಿ, ವಿವಿಧ ಗ್ರಾಮದ ಕಲಾವಿದರು ಭಜನಾಸೇವೆ ನಡೆಸಿಕೊಟ್ಟರು. ಸುಜಾತಾ ಮಗದುಮ್ಮ, ಸುಪ್ರೀಯಾ ಕಲಾಚಂದ್ರ ಗುರುಭಕ್ತಿ ಗಾಯನ ಪ್ರಸ್ತುತಪಡಿಸಿದರು. ಭರತ ಕಲಾಚಂದ್ರ ಪ್ರಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು ಮಹಾದೇವ ಹಾಲಪ್ಪನವರ ಸ್ವಾಗತಿಸಿ ವಂದಿಸಿದರು.