ಬೆಂಗಳೂರು :–
“ಕಾರ್ಯನಿರ್ವಹಿಸುವ ಬೆಂಗಳೂರಿನಲ್ಲಿ ಎಟಿಎಂ ರೀತಿ ಇಡ್ಲಿ ಮಷಿನ್ ಅಳವಡಿಕೆ, ೫೫ ಸೆಕೆಂಡ್‌ನಲ್ಲಿ ಇಡ್ಲಿ ರೆಡಿ”
ಬೆಂಗಳೂರಿನಲ್ಲಿ ದಿನದ ೨೪ ಗಂಟೆಯೂ ಎಟಿಎಂ ರೀತಿಯಲ್ಲಿ ಕಾರ್ಯನಿರ್ವಹಿಸುವ ಇಡ್ಲಿ ಮಷಿನ್ ಬಂದಿದ್ದು, ಈ ಕುರಿತಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಇಡ್ಲಿ ಮಷೀನ್‌ನಲ್ಲಿ ಉದ್ದಿನ ವಡೆ ಸೇರಿದಂತೆ ಇತರೆ ಕೆಲವು ತಿಂಡಿಗಳೂ ಸಹ ಸಿಗುತ್ತವೆ.
ಬೆಂಗಳೂರಿನ ಬಿಳೇಕಹಳ್ಳಿಯ ವಿಜಯ ಕಾಂಪ್ಲೆಕ್ಸ್‌ನಲ್ಲಿ ಈ ಮಷೀನ್ ಅಳವಡಿಸಲಾಗಿದ್ದು,
QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಬೇಕಿರುವ ತಿಂಡಿಯನ್ನು ಆಯ್ಕೆ ಮಾಡಿ ಪಡೆಯಬಹುದು.
೫೫ ಸೆಕೆಂಡ್‌ನಲ್ಲಿ ಇಡ್ಲಿ ತಯಾರಾಗಿ ಗ್ರಾಹಕರಿಗೆ ದೊರೆಯುತ್ತದೆ.