ರಾಯಿಟರ್ಸ್ ಪ್ರಕಾರ, ಸೆಪ್ಟೆಂಬರ್ ೩-೪ ರಂದು ನಡೆಯಲಿರುವ ಜಿ ಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಸರ್ಕಾರ ೧೭೫ ಉತ್ಪನ್ನಗಳ ಮೇಲಿನ ಜಿ ಎಸ್ ಟಿ ಯನ್ನು ಶೇ.೧೦ ರಷ್ಟು ಕಡಿತಗೊಳಿಸಲು ಸಿದ್ಧತೆ ನಡೆಸುತ್ತಿದೆ.

ಟಾಲ್ಕಮ್ ಪೌಡರ್, ಟೂತ್‌ಪೇಸ್ಟ್, ಶಾಂಪೂಗಳಂತಹ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.೧೮ ರಿಂದ ಶೇ.೫ ಕ್ಕೆ ಮತ್ತು ಎ ಸಿ, ಟಿವಿ ಗಳ ಮೇಲಿನ ತೆರಿಗೆ ಶೇ.೨೮ ರಿಂದ ಶೇ.೧೮ ಕ್ಕೆ ಇಳಿಸಬಹುದು ಎಂದು ವರದಿಯಾಗಿದೆ. ಸಣ್ಣ ಗಾತ್ರದ ಪೆಟ್ರೋಲ್ ಹೈಬ್ರಿಡ್ ಕಾರ್ ಮೇಲಿನ ಜಿಎಸ್‌ಟಿ ಯೂ ಕಡಿತಗೊಳ್ಳಬಹುದು ಎಂದು ವರದಿಗಳ ಹೇಳಿಕೆ.