ಬೆಂಗಳೂರು :–
ಕೇರಳದ ಭೀಮನಾಡ್ ಪೆರಿಂಬತ್ತರಿ ಎಂಬಲ್ಲಿ ವಾಸವಿದ್ದ ದಿನಗೂಲಿ ನೌಕರ ಕೃಷ್ಣನ್‌ಕುಟ್ಟಿ ಎಂಬುವವರು ಕೇರಳ ಸರ್ಕಾರ ನಡೆಸುವ ಸಮೃದ್ಧಿ ಲಾಟರಿಯಲ್ಲಿ ₹ ೧ ಕೋಟಿ ಬಹುಮಾನ ಗೆದ್ದಿದ್ದಾರೆ.
ಕೃಷ್ಣನ್‌ಕುಟ್ಟಿ ಅವರಿಗೆ ಮಾತನಾಡಲು ಆಗುವುದಿಲ್ಲ ಮತ್ತು ಕಿವಿಯೂ ಕೇಳಿಸುವುದಿಲ್ಲ. ಅವರು ಈ ಬಾರಿ ನನ್ನಿಂದ ೪ ಲಾಟರಿ ಟಿಕೆಟ್ ಖರೀದಿಸಿದ್ದು,
ಅದರಲ್ಲಿ ಒಂದು ಟಿಕೆಟ್‌ಗೆ ಮೊದಲ ಬಹುಮಾನ ಬಂದಿದೆ ಎಂದು ಲಾಟರಿ ಟಿಕೆಟ್ ಮಾರಾಟಗಾರ ಮಾಂಬಟ ಅಬ್ದು ಅವರು ಹೇಳಿದ್ದಾರೆ.