ಬೆಂಗಳೂರು :–
ಸರ್ಕಾರ ಈಗಾಗಲೇ ಮೂರ್ನಾಲ್ಕು ತಿಂಗಳ ಗೃಹ ಲಕ್ಷ್ಮಿ ಹಣವನ್ನ ಬಾಕಿ ಉಳಿಸಿಕೊಂಡಿದೆ. ಕಳೆದ ತಿಂಗಳೇ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ ಎಂದು ಹೇಳಲಾಗಿತ್ತು.
ಇದುವರೆಗೂ ಗೃಹ ಲಕ್ಷ್ಮಿ ಹಣ ಬಂದಿಲ್ಲ. ಇದೀಗ ಗೃಹಲಕ್ಷ್ಮಿ ಯೋಜನೆಯಡಿ ೨೨ ಮತ್ತು ೨೩ನೇ ಕಂತಿನ ಒಟ್ಟು ₹4,000 ಹಣವನ್ನು ಇದೇ ತಿಂಗಳು ಬರುವ ಸೆಪ್ಟೆಂಬರ್ ೭ ಮತ್ತು ೯ ನೇ ತಾರೀಖಿಗೆ ಬಿಡುಗಡೆ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.
ಗೃಹಲಕ್ಷ್ಮಿ ಯೋಜನೆಯ 22 ಮತ್ತು 23ನನೇ ಕಂತಿನ ₹4,000 ಹಣವನ್ನು ದಸರಾ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಲಾಗಿದೆ.





