ಚಿಕ್ಕೋಡಿ :–
ತಾಲುಕಿನ ಇಂಗಳಿ ಗ್ರಾಮ ಪಂಚಾಯಿತಿ ಕೂಸಿನ ಮನೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬ ಹಾಗೂ
ಭಾರತದ ಮೊದಲ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು
ಮಕ್ಕಳು ಕೂಸಿನ ಮನೆಯ ಆರೈಕೆದಾರರಿಗೆ ಹೂ ಗುಚ್ಛ ನೀಡುವ ಮೂಲಕ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಕೋರಿದರು
ಆರೈಕೆದಾರರಾದ ಆಶಾರಾಣಿ ಕಾಂಬಳೆ ಮಾತನಾಡಿ ಕೂಸಿನ ಮನೆಯ ಮಕ್ಕಳು ನಮ್ಮ ಮಕ್ಕಳು ಹಾಗೆ ನೋಡಿಕೊಳ್ಳುತ್ತೇವೆ ಪ್ರತಿದಿನ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಹಾಗೂ ಆಟದ ಜೊತೆ ಪಾಠ ಹೇಳಿ ಕೊಡಲಾಗುತ್ತಿದೆ ಹಾಗೂ ಗ್ರಾಮ ಪಂಚಾಯಿತಿಯಿಂದ ಕೂಸಿನ ಮನೆಗೆ ಎಲ್ಲಾ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದ್ದರು
ಕಾವೇರಿ ಶಾಸ್ತ್ರಿ ಪೂಜಾ ಕಾಂಬಳೆ ಗೌರಾ ಶಾಸ್ತ್ರಿ ಪಲ್ಲವಿ ಕಾಂಬಳೆ ರೇಷ್ಮಾ ಮಾಳಕರ ಉಪಸ್ಥಿತರಿದ್ದರು.





