ವರದಿಗಳ ಪ್ರಕಾರ ಶಾಂತಿ ಯೋಜನೆಗೆ ಹಮಾಸ್ ಒಪ್ಪಿಕೊಂಡ ಬಳಿಕ ಆಪರೇಷನ್ ಗಾಜಾ ನಿಲ್ಲಿಸಿದ ಇಸ್ರೇಲ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಂಬ್ ದಾಳಿಯನ್ನು ನಿಲ್ಲಿಸುವಂತೆ ಕರೆ ನೀಡಿದ ನಂತರ, ಇಸ್ರೇಲ್ ಸರ್ಕಾರವು ಗಾಜಾ ನಗರವನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ದೇಶದ ಸೇನೆಗೆ ಸೂಚಿಸಿದೆ ಎಂದು ವರದಿಯಾಗಿದೆ.
“ಸರ್ಕಾರವು ಪಡೆಗಳಿಗೆ ಚಟುವಟಿಕೆಯನ್ನು ಕನಿಷ್ಠ ಹಂತಕ್ಕೆ ಇಳಿಸಲು ಮತ್ತು ರಕ್ಷಣಾತ್ಮಕ ಕ್ರಮಗಳನ್ನು ಮಾತ್ರ ಕೈಗೊಳ್ಳಲು” ಸೂಚಿಸಿದೆ.
ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಸೇರಿದಂತೆ ಗಾಜಾ ಶಾಂತಿ ಯೋಜನೆಯ ಕೆಲವು ಭಾಗಗಳಿಗೆ ಹಮಾಸ್ ಒಪ್ಪಿಕೊಂಡಿದೆ.





