ಯು ಪಿ ರಾಜ್ಯದ ಸೀತಾಪುರದಲ್ಲಿ ವ್ಯಕ್ತಿಯೊಬ್ಬ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ ದೂರು ನೀಡಿ, ತನ್ನ ಹೆಂಡತಿಯಿಂದ ಬೇಸತ್ತಿರುವುದಾಗಿ ಕಣ್ಣೀರಿಟ್ಟು ತನ್ನ ಅಳಲು ತೋಡಿಕೊಂಡಿದ್ದಾನೆ.
ಆಕೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ ಮತ್ತು ರಾತ್ರಿಯಿಡೀ ಹಾವಿನಂತೆ ನಟಿಸಿ, ತನಗೆ ಬೆದರಿಕೆ ಹಾಕಿ, ಕೊಲ್ಲಲು ಪ್ರಯತ್ನಿಸಿದ್ದಾಳೆ ಎಂದು ಆತ ತಿಳಿಸಿದ್ದಾನೆ.
ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳು ಪೊಲೀಸರಿಗೆ ಆದೇಶ ಮಾಡಿದರು.





