“ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಇನ್ನು ಮುಂದೆ 5 ಕೆ.ಜಿ. ಅಕ್ಕಿ ವಿತರಿಸಲಾಗುವುದಿಲ್ಲ ಬದಲಾಗಿ” ?

ಬೆಂಗಳೂರು :–

ಸಚಿವ ಸಂಪುಟದ ನಿರ್ಧಾರದಂತೆ, ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಇನ್ನು ಮುಂದೆ 5 ಕೆ.ಜಿ. ಅಕ್ಕಿ ವಿತರಿಸಲಾಗುವುದಿಲ್ಲ.

ಬದಲಾಗಿ, 5 ಕೆ.ಜಿ. ಅಕ್ಕಿಯ ಮೌಲ್ಯಕ್ಕೆ ಸಮನಾದ ಆಹಾರ ಕಿಟ್ ವಿತರಿಸಲು ತೀರ್ಮಾನಿಸಲಾಗಿದೆ. ಈ ಕಿಟ್‌ನಲ್ಲಿ ತೊಗರಿ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಒಳಗೊಂಡಿರುತ್ತದೆ.

ಈ ಬಗ್ಗೆ ಮಾತನಾಡಿದ ಸಚಿವರಾದ ಪಾಟೀಲ್ ಅವರು, ಈ ಕಿಟ್ ನೀಡಿಕೆಯಿಂದಾಗಿ ಸರ್ಕಾರದ ಮೇಲೆ ಸ್ವಲ್ಪಮಟ್ಟಿಗೆ ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಕಿಟ್ ವಿತರಣೆಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಯಾವ ತಿಂಗಳಿನಿಂದ ಈ ಯೋಜನೆ ಜಾರಿಗೆ ಬರಲಿದೆ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಂದಿರಾ ಆಹಾರ ಕಿಟ್‌ನಲ್ಲಿ ಏನಿರುತ್ತದೆ,
ತೊಗರಿ ಬೇಳೆ – 1 ಕೆಜಿ,
ಹೆಸರು ಕಾಳು – 1 ಕೆಜಿ,
ಅಡುಗೆ ಎಣ್ಣೆ – 1 ಕೆಜಿ,
ಸಕ್ಕರೆ – 1 ಕೆಜಿ ಮತ್ತು
ಉಪ್ಪು – ಕೆಜಿ ಒಳಗೊಂಡಿರುತ್ತದೆ.

Share this post:

Leave a Reply

Your email address will not be published. Required fields are marked *

You cannot copy content of this page