ದೇಹದಲ್ಲಿ ಸಾಕಷ್ಟು ನೀರಿನಾಂಶ ಇಲ್ಲದಿದ್ದರೆ “ಆರು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ” ಎಂದು ವೈದ್ಯ ಶ್ರೀರಾಮ್ ನೇನೆ ಅವರು ತಿಳಿಸಿದರು.

ದೇಹವು ನಿರ್ಜಲೀಕರಣಗೊಂಡಾಗ ಮೂತ್ರದ ಬಣ್ಣ ಗಾಢ ಹಳದಿಗೆ ತಿರುಗುತ್ತದೆ. ಚರ್ಮ ಹಾಗೂ ಬಾಯಿ ಒಣಗಿ ತಲೆನೋವು ಉಂಟಾಗುತ್ತದೆ ಎಂದು ಅವರು ಹೇಳಿದರು
ಉಳಿದಂತೆ, ಸುಸ್ತು, ಸ್ನಾಯು ನೋವು ಹಾಗೂ ತಲೆಸುತ್ತು ಸಹ ಉಂಟಾಗಬಹುದು ಎಂದು ಅವರು ವಿವರಿಸಿದ್ದಾರೆ.
ಓರ್ವ ವ್ಯಕ್ತಿ ದಿನಕ್ಕೆ ಕನಿಷ್ಠ ೪ – ೫ ಲೀಟರ್ ನೀರನ್ನು ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ.





