ನವದೆಹಲಿ :–
ಕೆಮ್ಮಿನ ಸಿರಪ್ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ ಘಟನೆ ಬಳಿಕ ಕೇಂದ್ರ ಸರ್ಕಾರ 3 ಕಂಪನಿಗಳ ಸಿರಪ್ ಬ್ಯಾನ್ ಮಾಡಿದೆ.

“ಕೋಲ್ಸಿಫ್, ರೆಸ್ಪಿರ್‌ಫ್ರೆಶ್-ಟಿಆರ್ ಹಾಗೂ ರೀಲೈಫ್” ಸಿರಪ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆದು, ತಯಾರಿಕೆ ನಿಲ್ಲಿಸಲು ಆದೇಶಿಸಿದೆ.
ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಗೆ ಡಬ್ಲು ಎಚ್ ಒ (WHO) ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಮಾಹಿತಿ ನೀಡಿದೆ. ದೇಶಾದ್ಯಂತ ಕೆಮ್ಮಿನ ಸಿರಪ್‌ಗಳ ಗುಣಮಟ್ಟ ಪರಿಶೀಲನೆ ಆರಂಭಿಸಿದೆ.





