ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳ ವಿರುದ್ಧ ನೋ ಕಿಂಗ್ ಪ್ರತಿಭಟನೆಯ ಭಾಗವಾಗಿ ಅಮೆರಿಕದಾದ್ಯಂತ ಬೃಹತ್ ಜನಸಮೂಹ ಜಮಾಯಿಸಿತು.
ಪ್ರಜಾಪ್ರಭುತ್ವಕ್ಕೆ ಬೆದರಿಕೆಗಳಿವೆ ಎಂದು ಭಾವಿಸಲಾಗುತ್ತಿರುವ ಬಗ್ಗೆ, ಟ್ರಂಪ್ ಆಡಳಿತದ ವಲಸೆ ದಾಳಿಗಳು,
ಅಮೆರಿಕದ ನಗರಗಳಲ್ಲಿ ಸೈನ್ಯದ ನಿಯೋಜನೆ ಮತ್ತು ಆರೋಗ್ಯ ರಕ್ಷಣೆ ಸೇರಿದಂತೆ ಫೆಡರಲ್ ಕಾರ್ಯಕ್ರಮಗಳಲ್ಲಿನ ಕಡಿತಗಳ ವಿರುದ್ಧ ಜನರು ಪ್ರತಿಭಟನೆ ಮಾಡುತಿದ್ದಾರೆ.





