ಚಿಕ್ಕೋಡಿ :–
ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತದಲ್ಲಿ ಕರ್ತವ್ಯ ಲೋಪ ತೋರಿದ ಹಿನ್ನೆಲೆ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಸೇವೆಯಿಂದ ಅಮಾನತ್ತು ಮಾಡಿ ವರ್ಗಾವಣೆ ಆದೇಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಪಟ್ಟಣದ ಬಾನಂತಿ ಕೋಡಿ ಯಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾಕ್ಟರ್ ಜಯಲಕ್ಷ್ಮಿ ಮುಸಾಳೆ ಮತ್ತು ಶ್ರೀ ರೋಗ ತಜ್ಞ ಮತ್ತು ಪ್ರಶುತ್ತಿ, ಕಮಲಾ ಕುಲಗೇರಿ ಹಾಗೂ ಜಯಲಕ್ಷ್ಮಿ ಮುಸಾಳೆ
ಈ ಹಿಂದೆ ಹೆರಿಗೆ ನಂತರ ಜನನಾಂಗದಲ್ಲಿ ಹತ್ತಿ ತುಂಡು ಬಿಟ್ಟು ಹೊಲಿಗೆ ಹೊಲಿಗೆ ಹಾಕಿ ಕರ್ತವ್ಯದಲ್ಲಿ ನಿರ್ಲಕ್ಷ ತೋರಿರುವುದು ಜೊತೆಗೆ ನಿಯಮ ಬಹಿರವಾಗಿ ಖಾಸಗಿ ಸ್ಕ್ಯಾನಿಂಗ್ ಸೆಂಟರಗೆ ಹೆರಿಗೆಗೆ ಬಾನಂತಿಯರನ್ನು ಕಳುಹಿಸುತ್ತಿರುವ ಆರೋಪ ಕೇಳಿ ಬಂದಿತ್ತು
ಗರ್ಭಿಣಿ ಬಾನಂತಿಯ ಹೊಟ್ಟೆಯಲ್ಲಿನ ಮಗು ಡಾಕ್ಟರ್ ಕಮಲಾ ಕುಲಗೇರಿ ಅವರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂಬ ಆರೋಪ ವನ್ನು ವಿಶೇಷ ತನಿಖಾ ವೈದ್ಯಕೀಯ ತಂಡ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ವರದಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಅಮಾನತ್ತು ಮಾಡಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.





