ಚಿಕ್ಕೋಡಿ :–
ಪಟ್ಟಣದ ಅಂಕಲಿಕೂಟ ದಿಂದ ಬಸವ ವೃತ್ತದ ವರೆಗಿನ ರಸ್ತೆ ಅಗಲಿ ಹಾಗು ಅಭಿವೃದ್ಧಿ ಕಾರ್ಯಕ್ಕೆ ೪.೮೪ ಲಕ್ಷ ಹಣ ಮಂಜುರಾಗಿದೆ. ಕೂಡಲೆ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲಾಗು ಎಂದು ಹಾಲಿ ದೆಹಲಿ ವಿಶೇಷ ಪ್ರತಿನಿಧಿ ಹಾಗು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.

ಪಟ್ಟಣದ ಸಂಪಾದನಾ ಚರಮೂರ್ತಿ ಮಠದಲ್ಲಿ ಸೋಮವಾರ ನಡೆದ ಗುರುವಾರ ಪೇಟದ ರಸ್ತೆ ಅಗಲೀಕರಣ ಹಾಗೂ ವಿದ್ಯುತ್ ದೀಪ ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸುಮಾರು “೭ ಕೋಟಿ ಅನುದಾನದೊಂದಿಗೆ ವ್ಯಾಪಾರಸ್ತರ ಬಹುದಿನ ಬೇಡಿಕೆ ಈಡೇರಿಸಲಾಗಿದೆ”. ಅಭಿವೃದ್ಧಿಗೆ ಇನ್ನು ಅಗತ್ಯ ಇದ್ದಲ್ಲಿ ಶಾಸಕರ ಅನುದಾನದಡಿ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವದಾಗಿ ಭರವಸೆ ನೀಡಿದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ , ನಗರದ ವ್ಯಾಪಾರಸ್ಥರು ಬಹುದಿನಗಳ ಕನಸು ಇಡೆರಿದಂತಾಗಿದ್ದು, ಪ್ರಕಾಶ ಹುಕ್ಕೇರಿ ಯವರ ವಿಶೇಷ ಪ್ರಯತ್ನದಿಂದ ನಗರದ ವ್ಯಪಾರ ಪುನಶ್ಚೇತನ ಸಾಕ್ಷಿಯಾಗಿದ್ದಾರೆ. ಸಮಾಜದ ರೈತರು ಸೇರಿ ಎಲ್ಲವರ್ಗದ ಜನರಿಗೆ ನ್ಯಾಯ ವದಗಿಸಲು ಸದಾ ಸಿದ್ಧ ಎಂದರು.
ಶ್ರೀ ಸಂಪಾದನಾ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿದ್ಯವಹಿಸಿ ಮಾತನಾಡಿ ನಗರದಬಗ್ಗೆ ಇರುವ ಕಾಳಜಿ ಶ್ಲಾಘನೀಯ. ಅತ್ಯಾಧುನಿಕವಾದ ತಂತ್ರಜ್ಞಾನ ಉಳ್ಳ ಅಭಿವೃದ್ಧಿಗೆ ಶಾಸಕರು ಹೆಜ್ಜೆ ಹಾಕುತ್ತಿದ್ದಾರೆ. ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರು ಸಹಕರಿಸಿ ಎಂದರು.





