“ಚಿಕ್ಕೋಡಿ ಕೂಡಲೇ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಿ ಹೋರಾಟ ಸಮಿತಿಯಿಂದ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ”

ಚಿಕ್ಕೋಡಿ :–

ಪಟ್ಟಣದ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಚಿಕ್ಕೋಡಿ ಜಿಲ್ಲೆಗಾಗಿ ಮನವಿ. ಕಳೆದ ಮೂರು ದಶಕಗಳಿಂದ ಬೆಳಗಾವಿ ವಿಭಜನೆಯಾಗಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ಸತತವಾಗಿ ನಡೆದಿದೆ, “ಕೂಡಲೇ ಪ್ರತ್ಯೇಕ ಜಿಲ್ಲೆಯನ್ನು ಘೋಷಿಸಿ” ಎಂದು, ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು ಬಡಿಗೇರ ಇವರ ನೇತೃತ್ವದಲ್ಲಿ, ಲೊಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಇವರಿಗೆ ಮನವಿ ಸಲ್ಲಿಸಿದರು,

ಮನವಿಸ್ವೀಕರಿಸಿ ಸಚಿವರು ಮಾತನಾಡಿ “ಸರಕಾರಕ್ಕೆ ಒತ್ತಡ ಮಾಡಿ ಪ್ರತ್ಯೇಕ ಜಿಲ್ಲೆ ಘೋಷನೆಗಾಗಿ” ಪ್ರಯತ್ನಿಸುವೆ ಎಂದು ಹೇಳಿದರು.

ಆದರೆ ಈವರೆಗೆ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲಾ ಘೋಷಣೆ ಮಾಡುತ್ತಿಲ್ಲ, ಪ್ರತಿಯೊಬ್ಬ ಜನಪ್ರತಿನಿಧಯು ಜಿಲ್ಲೆ ಮಾಡುತ್ತೇವೆ, ಮಾಡುತ್ತೇವೆ ಅಂತಾ ಹೇಳುತ್ತಲೇ ಅಧಿಕಾರಗಳನ್ನು ಅನುಭವಿಸುತ್ತಿದ್ದಾರೆ, ನುಡಿದಂತೆ ನಡೆಯುವ ಸರಕಾರ ತನ್ನ ಮಾತನ್ನು ತಪ್ಪುತ್ತಲಿದೆ, ಚಿಕ್ಕೋಡಿ ಭಾಗದ ಜನರಿಗೆ ಘೋರ ಅನ್ಯಾಯವಾಗುತ್ತಿದೆ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಹೋರಾಟ ಕೇವಲ ಹೋರಾಟ ಆಗಿ ಉಳಿಯದೇ ಕನಸು ನನಸಾಗಲಿ ಎಂದು ಸಚಿವರಲ್ಲಿ ಬೇಡಿಕೊಂಡರು. ಈ ಸಂಧರ್ಭದಲ್ಲಿ ಮಹಾವೀರ ಮೋಹಿತೆ, ಅಣ್ಣಪ್ಪಾ ನಸಲಸಪೂರೆ, ರಾಜು ಕೋಟಗಿ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು ಬಡಿಗೇರ, ಉಪಾಧ್ಯಕ್ಷ ಸಂತೋಷ ಪೂಜೇರಿ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಹೋರಾಟಗಾರರಾದ ಅಮೂಲ ನಾವಿ, ಸಚಿವ ದೊಡ್ಡಮನಿ, ರಮೇಶ ಡಂಗೇರ, ಸಂಜಯ ಪಾಟೀಲ, ಬಸವರಾಜ ಸಾಜನೆ, ವಿಜಯ ಬ್ಯಾಳಿ, ರವಿ ನಾಯಿಕ ಮುಂತಾದವರು ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *

You cannot copy content of this page