ಬೆಂಗಳೂರು :–
ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರು ಅಳಿಸಲು ಪ್ರತಿ ಮತಕ್ಕೆ ₹ ೮೦ ನೀಡಲಾಗುತ್ತಿತ್ತು ಎಂಬ ಮಾಹಿತಿ ಎಸ್‌ಐಟಿ ತನಿಖೆಯಿಂದ ಬಹಿರಂಗಗೊಂಡಿದೆ ಎಂದು ವರದಿಯಾಗಿದೆ. ಒಟ್ಟು ೬,೦೧೮ ಮತಗಳನ್ನು ಅಳಿಸಲಾಗಿದ್ದು,
ಇದರ ಹಿಂದೆ ಸ್ಥಳೀಯ ಡೇಟಾ ಸೆಂಟರ್ ಹಾಗೂ ಬಿಜೆಪಿ ನಾಯಕನ ಸಹಾಯಕರ ಕೈವಾಡವಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಮತದಾರರ ಹೆಸರು ಅಳಿಸಲು ₹ ೪.೮ ಲಕ್ಷ ಪಾವತಿಸಲಾಗಿದೆ ಎಂದು ವರದಿ ತಿಳಿಸಿದೆ.





