ತೆಂಗಿನ ಎಣ್ಣೆ, ಹರಳೆಣ್ಣೆ, ಅಲೋವೆರಾ ಅಥವಾ ರೋಸ್ಮರಿಯನ್ನು ಹಚ್ಚುವುದರಿಂದ ಕೂದಲು ಎರಡು ಪಟ್ಟು ವೇಗವಾಗಿ ಬೆಳೆಯುತ್ತವೆ ಎಂದು ವೈದ್ಯ ಮತ್ತು ಶಿಕ್ಷಣತಜ್ಞ ಸಲೀಂ ಜೈದಿ ತಿಳಿಸಿದ್ದಾರೆ.

ಹರಳೆಣ್ಣೆ ಹಾಗೂ ರೋಸ್ಮರಿ ಎಣ್ಣೆ ರಕ್ತ ಪರಿಚಲನೆ ಹೆಚ್ಚಿಸುತ್ತದೆ ಅದರಂತೆ ಅಲೋವೆರಾ ಸತ್ತ ಜೀವಕೋಶಗಳನ್ನು ತೆಗೆದುಹಾಕುವ ಮೂಲಕ ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ ಎಂದು ಅವರು ಹೇಳಿದರು.

ವೈದ್ಯರ ಪ್ರಕಾರ, ತೆಂಗಿನ ಎಣ್ಣೆಯನ್ನು ಕೊಂಚ ಬಿಸಿ ಮಾಡಿ ವಾರಕ್ಕೆ 2ರಿಂದ 3 ಬಾರಿ ಕೂದಲಿಗೆ ಹಚ್ಚಬೇಕು.





