ಚಿಕ್ಕೋಡಿ :–
ಪಟ್ಟಣದ ಸಿಟಿಇ ಸಂಸ್ಥೆಯ ಆರ್.ಡಿ.ಕಾಲೇಜಿನ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಅಧಿಕಾರಿಗಳ ಇಲಾಖೆ ವ್ಯಾಪ್ತಿಯ ಹೆಲ್ತ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ರಾಂಪೇಜ್ ರಾಯಬಾಗ ತಂಡ ಪ್ರಥಮ ಸ್ಥಾನ ಪಡೆದು ವಿಜಯಶಾಲಿಯಾಗಿದೆ. ಚಿಕ್ಕೋಡಿ ಟೈಗರ ದ್ವಿತೀಯ ಮತ್ತು ಗೋಕಾಕ ವಾರಿಯರ್ಸ್ ತೃತೀಯ ಸ್ಥಾನ ಪಡೆದುಕೊಂಡಿದೆ.
ಮ್ಯಾನ ಆಪ್ ಮ್ಯಾಚ್ ಪ್ರಶಾಂತ ಪಾಟೀಲ. ಬೆಷ್ಟ ಬೌಲರ ಆನಂದ ನಾವಿ. ಉತ್ತಮ ಬ್ಯಾಟ್ಸ್‌ಮನ್ ಡಾ.ಮಂಜುನಾಥ..ಉತ್ತಮ ಆಲರೌಂಡರ ಡಾ.ಸುಮಿತ ಪಾಟೀಲ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಸ್.ಎಸ್.ಗಡೇದ. ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಬಿ.ಎ.ಕುಂಬಾರ. ಕಚೇರಿ ಅಧೀಕ್ಷಕ ನವೀನ ಗಂಗರೆಡ್ಡಿ ಗೆಲುವು ಸಾಧಿಸಿದ ತಂಡಕ್ಕೆ ಬಹುಮಾನ ನೀಡಿದರು.
ಈ ಸಂದರ್ಭದಲ್ಲಿ ಡಾ.ಸಂತೋಷ ಕೊಣ್ಣೂರೆ.ಡಾ.ಬಸಗೌಡ ಕಾಗೆ.ಡಾ.ಉದಯ ಕುಡಚಿ.ಎಸ್.ಆರ್.ಪಾಟೀಲ. ಡಾ. ಶಾಂತಾರಾಮ ಬಾಗೇವಾಡಿ, ಡಾ. ಅರುಣ ಝಾಪಗೋಳ, ಡಾ. ವಿನೋದ ಘಸ್ತಿ, ಡಾ. ಸಚಿನ್ ಬಕರೆ,ಜಿ.ಜಿ. ಕುಲಕರ್ಣಿ, ದಯಾನಂದ ತೆಗೋರ, ದೀಪಕ ಚಿನ್ನಾರಿ, ದೀಪಕ ಅಗ್ನಿಹೋತ್ರಿ, ಕುಮಾರಸ್ವಾಮಿ ಟಿ., ಗಿರೀಶ ಕುಲಕರ್ಣಿ, ಉತ್ತಮಸಿಂಗ್ ರಜಪೋತ, ಸಿದ್ದು ಹಟ್ಯಾಗೋಳ, ಜಗದೀಶ ಹುಲಕುಂದ, ಚಿದಾನಂದ ಕಲಾದಗಿಮಠ, ಮಂಜು ಚೌಗಲಾ, ಪ್ರವೀಣ ಪಾಟೀಲ, ರಾಜು ದತ್ತವಾಡೆ, ರಾಜಶೇಖರ ಹಳೆಮನಿ, ಪ್ರಕಾಶ ಮಕಾಳಿ, ಸಂಜು ಅಮ್ಮಜಗೋಳ, ಅನೀಲ ಅರಕೇರಿ, ಕುಮಾರ ಚೌಗಲಾ, ನಿರಂಜನ ಭೀಮನಾಯ್ಕ, ರಾಮಪ್ಪಾ ಕರೋಶಿ, ಸಂಜು ಕುಲಕರ್ಣಿ, ರಮೇಶ ದೊಡಮನಿ, ಡಾ. ಸಚಿನ್ ಹಾರೂಗೇರಿ, ವಿನಾಯಕ ಕೋಷ್ಚಿ ಹಾಗೂ ಇತರರು ಉಪಸ್ಥಿತರಿದ್ದರು.





