ನಿಜವಾದ ತುಪ್ಪ ಮುಟ್ಟಿದ ತಕ್ಷಣ ಕರಗುತ್ತದೆ, ಸಿಹಿ ಪರಿಮಳ ಹೊರಸೂಸುತ್ತದೆ. ಅದು ಗಟ್ಟಿ , ಕೈಗಳಲ್ಲಿ ಜಿಗುಟಾಗಿದ್ದರೆ, ಅದು ಕಲಬೆರಕೆಯಾಗಿರಬಹುದು ಎಂದು ನ್ಯೂಸ್ ೧೮ ವರದಿ ಮಾಡಿದೆ.

ಪರಿ ಶುದ್ಧತೆ ಯನ್ನು ಪರೀಕ್ಷಸಲು, ಜನರು ಅದನ್ನು ೩ – ೪ ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇಡಬಹುದು. ಶುದ್ಧ ತುಪ್ಪ ಏಕರೂಪವಾಗಿ ಗಟ್ಟಿಯಾಗುತ್ತದೆ, ಆದರೆ ಕಲಬೆರಕೆ ತುಪ್ಪ ಪದರು ಪದರಗಳಾಗಿ ಬೇರ್ಪಡುತ್ತದೆ.
ಜನರು ಒಂದು ಚಮಚ ತುಪ್ಪವನ್ನು ನೀರಿಗೆ ಹಾಕಬಹುದು. ಅದು ತೇಲಿದರೆ, ಅದು ಶುದ್ಧ ಮತ್ತು ಮುಳುಗಿದರೆ ಅದು ಕಲಬೆರಕೆ ಎಂದ ಅರ್ಥ.





