ಬೆಂಗಳೂರು :–
ದ್ವಿತೀಯ ಪಿಯುಸಿಯ ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 24, ಪ್ರಾಯೋಗಿಕ ಪರೀಕ್ಷೆ ಇರುವ ವಿಷಯಗಳಲ್ಲಿ ಕನಿಷ್ಠ 21 ಅಂಕಗಳು ಪಡೆಯುವುದು ಕಡ್ಡಾಯವಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶಿಸಿದೆ.

ವಿದ್ಯಾರ್ಥಿಗಳು ಆಂತರಿಕ ಅಂಕ ಸೇರಿ ಕನಿಷ್ಠ 30 ಅಂಕ, ಎಲ್ಲಾ ವಿಷಯಗಳಲ್ಲಿ ಒಟ್ಟಾರೆಯಾಗಿ ಶೇ.33 ಅಂಕಗಳನ್ನು ಪಡೆದರೆ ಉತ್ತೀರ್ಣರಾಗುತ್ತಾರೆ.
ಆಂತರಿಕ ಮೌಲ್ಯಮಾಪನಕ್ಕೆ ಕನಿಷ್ಠ ಅಂಕಗಳ ಮಿತಿ ನಿಗದಿಪಡಿಸಿರುವುದಿಲ್ಲ ಎಂದು ಅದು ತಿಳಿಸಿದೆ.





