ಬೆಂಗಳೂರು :–
ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ಅಕಾಡೆಮಿ, ಬೆಂಗಳೂರು ಅವರು ನಾರಾಯಣ ಹೃದಯಾಲಯ ಅವರ ಸಹಯೋಗದಲ್ಲಿ ಗುತ್ತಿಗೆದಾರರು ಮತ್ತು ಪೇಂಟರ್ಸ್ ಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದರು.

ಒಟ್ಟು 75 ಮಂದಿ ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದರು.
ಈ ಉಚಿತ ಆರೋಗ್ಯ ತಪಾಸಣಾ ಶಿಬಿರವು 29 ಅಕ್ಟೋಬರ್ 2025 ರಂದು, ಸುಧಾಮನಗರ, ಲಾಲ್‌ಬಾಗ್ ಮೇನ್ ರೋಡ್, ಬೆಂಗಳೂರು–560027 ನಲ್ಲಿ ಇರುವ ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ಅಕಾಡೆಮಿಯಲ್ಲಿ ನಡೆಯಿತು.

ಈ ಶಿಬಿರದಲ್ಲಿ ಕೆಳಗಿನ ಪರೀಕ್ಷೆಗಳನ್ನು ನಡೆಸಲಾಯಿತು.
ಎತ್ತರ ಮತ್ತು ತೂಕ
ರಕ್ತದ ಒತ್ತಡ (BP)
ರ್ಯಾಂಡಮ್ ಬ್ಲಡ್ ಶುಗರ್ ಟೆಸ್ಟ್ (RBS)
ಹೀಮೋಗ್ಲೋಬಿನ್ (HB)
ECG
ವೈದ್ಯರ ಸಮಾಲೋಚನೆ
ಇದೆ ಸಮಯದಲ್ಲಿ, ಪೇಂಟಿಗ್ ಗುತ್ತಿಗೆದಾರರಿಗೆ ಆರೋಗ್ಯ ಮತ್ತು ಸುರಕ್ಷತಾ ಜಾಗೃತಿ ತರಬೇತಿ ನೀಡಲಾಯಿತು ಮತ್ತು ಆರೋಗ್ಯ ಹಾಗೂ ಸಮಗ್ರ ಕಲ್ಯಾಣದ ಮಹತ್ವವನ್ನು ವಿವರಿಸಲಾಯಿತು.
ECG ಪರೀಕ್ಷೆಯ ನಂತರ, ವೈದ್ಯರು ಗುತ್ತಿಗೆದಾರರಿಗೆ ಮುಖ್ಯ ತಪಾಸಣಾ ಅಂಶಗಳು ಹಾಗೂ ಮುಂದಿನ ಸಲಹೆಗಳನ್ನು ನೀಡಿದರು.
ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ಅಕಾಡೆಮಿ ತಂಡವು ತಿಂಡಿ ಮತ್ತು ಜ್ಯೂಸ್ ವಿತರಿಸಿತು.
ನಾರಾಯಣ ಹೃದಯಾಲಯ ತಂಡದ ಸದಸ್ಯರಾದ ದೇವರಾಜ ಹಾಗೂ ಇತರರು ಮತ್ತು ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ಅಕಾಡೆಮಿ ತಂಡದ ಜಯಪ್ರಕಾಶ, ಅರುಣ ಹಾಗೂ ಇತರರು ಶಿಬಿರದ ಉಸ್ತುವಾರಿ ವಹಿಸಿದ್ದರು.





